ಹಂಪಿ ಉತ್ಸವ ಅಧಿಕಾರಿ, ಪೊಲೀಸರದ್ದಾಗಿದೆ: ಜಿನಗಾ
ಹಂಪಿ: ಉತ್ಸವ ಜನೋತ್ಸವವಾಗದೆ ಅಧಿಕಾರಿಗಳು, ಪೊಲೀಸರ ಉತ್ಸವವಾಗಿದ್ದು ಬೇಸರ ತಂದಿದೆ ಎಂದು ಎಂಎಲ್ಸಿ ಮೃತ್ಯುಂಜಯ ಜಿನಗಾ ಹೇಳಿದರು. ಮಾಧ್ಯಮದ ಕೇಂದ್ರದಲ್ಲಿ ಮಾತನಾಡಿ, ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸಭಿಕರಿಲ್ಲದ್ದು ನೋಡಿ, ಹಿಂದೆ ಕುಳಿತಿದ್ದವರನ್ನು ಮುಂದೆ ಬರುವಂತೆ ಸಭೆಯಲ್ಲಿ ಹೇಳಿದ್ದು ಈ ಉತ್ಸವಕ್ಕೆ ಅರ್ಥವಿಲ್ಲ. ಇದು ರಾಜಕಾರಣಿಗಳ, ಅಧಿಕಾರಿಗಳ ಉತ್ಸವ. ಜನೋತ್ಸವ ಅಲ್ಲ. ಪ್ರದರ್ಶನಗಳಿಗೆ ಶುಲ್ಕ ವಿಧಿಸಿದ್ದರಿಂದ ಅವರ ಭಾಗವಹಿಸುವಿಕೆ ತಡೆ ಹಿಡಿಯಲಾಗಿದೆ. ಕೊರತೆಗಳಿದ್ದರೂ ಜಿಲ್ಲಾಡಳಿತ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರಚಾರ ಕೊರತೆ, ಪ್ಲಾಟಿನಂ, ಗೋಲ್ಡನ್ ಕಾರ್ಡ್ ಇದ್ದಿದ್ದರಿಂದ ಜನ ಬರಲಿಲ್ಲ. ಸಣ್ಣ ಪುಟ್ಟ ಅಂಗಡಿ ವ್ಯಾಪಾರಿಗಳಿಗೆ ಅವಕಾಶ ನೀಡದ್ದರಿಂದ ಜನತೆ ನೀರು, ಉಪಾಹಾರಕ್ಕೆ ಪರದಾಡುವಂತಾಗಿದೆ ಎಂದು ದೂರಿದರು.
ಉತ್ಸವದಿಂದ ದೂರು ಉಳಿದ ಎಂಪಿಪಿ ಕುಟುಂಬ
ಹಂಪಿ: ಉತ್ಸವಕ್ಕೆ ಕಾರಣರಾದ ದಿ. ಎಂ.ಪಿ. ಪ್ರಕಾಶ್ ಕುಟುಂಬಸ್ಥರು ಈ ಬಾರಿ ಉತ್ಸವದಿಂದ ದೂರು ಉಳಿದಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಎಂ.ಪಿ. ಪ್ರಕಾಶ್ ಕಾಲದಲ್ಲಿ ಇಡಿ ಉತ್ಸವವ ಸಿದ್ಧತೆಯಿಂದ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿದ್ದರು. ಅವರ ನಿಧನ ಬಳಿಕ ಅವರ ಕುಟುಂಬವನ್ನು ಉತ್ಸವಕ್ಕೆ ಕಡೆಗಾಣಿಸಲಾಯಿತೆ? ಕಾರ್ಯಕ್ರಮ ಬಗ್ಗೆ ಅವರಿಗೆ ಮುನಿಸೋ? ಅನ್ಯ ಕಾರ್ಯ ನಿಮಿತ್ತ ಬರಲಿಲ್ಲವೋ ಎಂಬುದು ಅವರ ಗೈರು ಹಾಜರಿ ಚರ್ಚೆಗೆ ಕಾರಣವಾಗಿದೆ. 2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿತ್ತು. ಇದಕ್ಕೆ ಎಂ.ಪಿ. ಪ್ರಕಾಶ್ರ ಪುತ್ರ ಶಾಸಕ ಎಂ.ಪಿ. ರವೀಂದ್ರರನ್ನು ಆಹ್ವಾನಿಸಲಾಗಿತ್ತು. ಸನ್ಮಾನಿತರಾಗಿ ಆಹ್ವಾನಿಸಲಾಗಿದ್ದ ಎಂ.ಪಿ. ಪ್ರಕಾಶ್ರ ಪತ್ನಿ ರುದ್ರಾಂಬ ಗೈರು ಹಾಜರಾಗಿದ್ದು ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ. ಎಂ.ಪಿ. ರವೀಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ರ ಮಧ್ಯೆ ಬಿರುಕು ಕಾಣಿಸಿದೆ ಎಂಬ ಅನುಮಾನಗಳು ಮೂಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

