ಜಿಎಸ್ಎಸ್ ಕವನ ಎಲ್ಲ ಕಾಲಕ್ಕೂ ಅನ್ವಯ
ಕೊಟ್ಟೂರು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವನಗಳು ಜಗತ್ತಿನ ಎಲ್ಲಾ ಕಾಲಕ್ಕೂ ಅನ್ವಯಿಸುತ್ತವೆ ಎಂದು ಇಂಗ್ಲಿಷ್ ಉಪನ್ಯಾಸಕ ಎಚ್.ಎಂ. ನಿರಂಜನ ಅಭಿಪ್ರಾಪಟ್ಟರು. ಪಟ್ಟಣದ ಗಂಗೋತ್ರಿ ಪಿಯು ಕಾಲೇಜಿನಲ್ಲಿ ನಡೆದ ಬಯಲು ಸಾಹಿತ್ಯ ವೇದಿಕೆಯ ಮಾಸಿಕ ಕಾರ್ಯಕ್ರಮದಲ್ಲಿ ಜಿಎಸ್ಎಸ್ ಕುರಿತು ಭಾನುವಾರ ಉಪನ್ಯಾಸ ನೀಡಿ ಮಾತನಾಡಿದ ಅವರು, ಶಿವರುದ್ರಪ್ಪನವರ ನಿಧನ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ತಂದಿದೆ. ಕುವೆಂಪು, ಅಡಿಗರ ಪ್ರೀತಿಯ ಶಿಷ್ಯರಾಗಿದ್ದ ಅವರು, ಸಿದ್ಧಾಂತ, ಪಂಥ, ವರ್ಗಗಳಿಗೆ ಸೀಮಿತವಾಗಿರಲಿಲ್ಲ. ಇದರ ಸಾರವನ್ನು ಅವರು ಪ್ರತಿ ಕಾವ್ಯದಲ್ಲಿ ಬಿಂಬಿಸಿದ್ದಾರೆ ಎಂದರು. ರಾಜ್ಯದಲ್ಲಿ ಅರ್ಹತೆಯಿಲ್ಲದ ಕೆಲವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಬಹು ಚರ್ಚೆಯಾಗಿದೆ. ಅರ್ಹತೆ, ವಿಶಾಲತೆ ಇದ್ದರೂ ಜಿಎಸ್ಎಸ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಾರದಿದ್ದರೂ ಸಾಹಿತ್ಯಾಸಕ್ತರಲ್ಲಿ ಅಸಮಾಧಾನ ಇದೆ. ಕವಿ ಬದುಕಿನ ಮೀರಿ ಬಾಳಿದ ಅವರು, ಕಿರಿಯರಲ್ಲಿ ಆಶಯಗಳನ್ನು ತುಂಬುತ್ತ, ಪ್ರೋತ್ಸಾಹಿಸುತ್ತ ವಿಶಾಲತೆ ಮೆರೆದಿದ್ದರು. ಅವರ ಕಾವ್ಯಗಳು ನವೋದಯ, ನವ್ಯ ಸಾಹಿತ್ಯದಲ್ಲಿ ಸಮನ್ವಯತೆ ಹೊಂದಿದ್ದವು. ಇಂದು ಸಾಹಿತಿಗಳ ಕವನಗಳು ಸಾಹಿತ್ಯಾಸಕ್ತರಿಗೆ ಪುಸ್ತಕಕ್ಕಿಂತ ಸಿಡಿ ರೂಪದಲ್ಲಿ ಪರಿಚಯವಾಗುತ್ತಿವೆ ಎಂದರು. ಡಾ. ಸತೀಶ್ ಪಾಟೀಲ್, ಸಿದ್ದು ದೇವರಮನಿ, ನಾಗರಾಜ ಬಣಕಾರ, ಸೈಯದ್ ಜಾಸ್ಮೆ, ನಾರಾಯಣ ಉಪನ್ಯಾಸ ನೀಡಿದರು.
ಶಿಸ್ತಿನಿಂದ ಶಿಕ್ಷಣ ಪಡೆಯಿರಿ
ಕುರುಗೋಡು: ಶಿಕ್ಷಣ ಎನ್ನುವ ಶಿಸ್ತಿನ ಕ್ಷಣವನ್ನು ಮರೆಯದೆ ವಿದ್ಯೆಯನ್ನು ಪಡೆದಾಗ ಮಾತ್ರ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹರಗಿನಡೋಣಿ ಶ್ರೀಗಳು ಅಭಿಪ್ರಾಯಪಟ್ಟರು. ಪಟ್ಟಣಕ್ಕೆ ಸಮೀಪದ ಬಾದನಹಟ್ಟಿ ಗ್ರಾಮದ ಶ್ರೀನಂದಿ ಶಾಲೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಣ ಗಳಿಕೆಯ ಮುಖ್ಯ ಉದ್ದೇಶದಿಂದ ಬಹುತೇಕ ಖಾಸಗಿ ಶಾಲೆಗಳು ನಗರ ಪ್ರದೇಶಗಳಲ್ಲಿ ಸ್ಥಾಪಿಸಲು ಇಷ್ಟಪಡುವ ಇಂದಿನ ದಿನಗಳಲ್ಲಿ, ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀನಂದಿ ವಿದ್ಯಾಸಂಸ್ಥೆಯನ್ನು ಕುಗ್ರಾಮದಲ್ಲಿ ಸ್ಥಾಪಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಮ್ಮಿಗನೂರು ವಾಮದೇವ ಶ್ರೀಗಳು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕುಮಾರ್ ಸಿಂದಗಿ, ಕೆಎಂಎಫ್ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಶಿಕ್ಷಣ ಸಂಯೋಜಕ ಕೆ. ಗಾದಿಲಿಂಗಪ್ಪ, ಸಿಆರ್ಪಿ ಮಹಾಬಲೇಶ್ವರಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರವಿರೆಡ್ಡಿ, ಸೈಯದ್ ಇನಾಸ್, ಜೆ. ಗೋವಿಂದರೆಡ್ಡಿ, ಜೇಮ್ಸ್, ಶ್ರೀಮುರಳಿ, ದಾನೇಶ್ವರಿ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

