ಬಳ್ಳಾರಿ

ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ: ಎಂ. ಸುಧೀರ್

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಜ. 13
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಸದೃಢರಾಗಲು ಸಾಧ್ಯ ಎಂದು ಪುರಸಭೆ ಸದಸ್ಯ ಎಂ. ಸುಧೀರ್ ತಿಳಿಸಿದರು.
ಪಟ್ಟಣದ ಶಾರದ ವಿದ್ಯಾನಿಕೇತನ ಶಾಲೆಯಲ್ಲಿ 22ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಮಕ್ಕಳು ತಯಾರಿಸಿದ ವಿವಿಧ ಮಾದರಿಗಳ ವಸ್ತುಪ್ರದರ್ಶನ ಹಾಗೂ ಮಕ್ಕಳ ಏಕಾಂಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಅವರು ವಿವಿಧ ಕ್ಷೇತ್ರಗಳ ಪರಿಚಯ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಶಾರದಾ ವಿದ್ಯಾನಿಕೇತನ ಎಜುಕೇಷನಲ್ ಸೊಸೈಟಿ ಆಡಳಿತ ಮಂಡಳಿ ಕಾರ್ಯದರ್ಶಿ ಕೆ. ಪವನ್ಕುಮಾರ್ ರೆಡ್ಡಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಸೃಜನಶೀಲತೆ, ನೈತಿಕತೆ, ಪ್ರಾಮಾಣಿಕತೆ, ಅಧ್ಯಯನಶೀಲತೆ ಹಾಗೂ ಸಹಕಾರ ಮನೋಭಾವನೆಗಳನ್ನು ಕಲಿಸಲಾಗುತ್ತಿದೆ ಎಂದು ಹೇಳಿದರು.
ವಿಜ್ಞಾನ ವಸ್ತುಪ್ರದರ್ಶನವನ್ನು ಬಿಆರ್ಸಿ ಶರಣಪ್ಪ ವಟಗಲ್ ಉದ್ಘಾಟಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ವ್ಯವಸ್ಥಾಪಕ ವಿಶ್ವನಾಥ್ ಅಳವಂಡಿ, ಎಪಿಎಂಸಿ ಅಧ್ಯಕ್ಷ ಎನ್. ಪುರುಷೋತ್ತಮ, ಭುವನೇಶ್ವರಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಜಿ.ಜಿ. ಚಂದ್ರಣ್ಣ, ಸಿಆರ್ಪಿ ಮಹ್ಮದ್ ಇಸಾಕ್, ಸಿಆರ್ಪಿ ಎಲ್. ಶಂಕರ್ ನಾಯ್ಕ, ಮಾಜಿ ಪುರಸಭಾಧ್ಯಕ್ಷ ಪಿ. ಬ್ರಹ್ಮಯ್ಯ, ಶಿಕ್ಷಕ ಮಲ್ಲಿಕಾರ್ಜುನ, ಮುಖ್ಯಗುರು ಮೇರಿ ಮಮತಾ, ಎಂ. ಸತೀಶ್ಕುಮಾರ್ ಮಾತನಾಡಿದರು.
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಉಪ್ಪು ನೀರಿನಿಂದ, ನಿಂಬೆಯಿಂದ ವಿದ್ಯುತ್ ತಯಾರಿಕೆ, ಆಟೋಮ್ಯಾಟಿಕ್ ಬೀದಿ ದೀಪ, ಮಾನವ ದೇಹದ ವಿವಿಧ ಅಂಗಗಳ ಕಾರ್ಯ ನಿರೂಪಣೆ, ಜಗತ್ತಿನ 7 ಅದ್ಭುತಗಳು, ವಿವಿಧ ದಿನಪತ್ರಿಕೆಗಳ ಸುದ್ದಿ ತುಣಕುಗಳ ಸಂಗ್ರಹ ಸೇರಿದಂತೆ 40ಕ್ಕೂ ಹೆಚ್ಚು ಮಾದರಿಗಳು, ಕರಕುಶಲ ವಸ್ತುಪ್ರದರ್ಶನ ಗಮನ ಸೆಳೆದವು. ವಿಜಯನಗರದ ಶ್ರೀಕೃಷ್ಣದೇವರಾಯ ದರ್ಬಾರ್, ಕಿತ್ತೂರು ಸಂಸ್ಥಾನದಲ್ಲಿ ಬ್ರಿಟಿಷರು ಕಪ್ಪ ಕೇಳುವ ಪ್ರಸಂಗಗಳ ಅಭಿನಯ ಪ್ರೇಕ್ಷಕರ ಕಣ್ಮನ ಸೆಳೆದವು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.