ಜಿಲ್ಲಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ
ಬಳ್ಳಾರಿ: ಮುಸ್ಲಿಂ ಬಾಂಧವರು ಮಂಗಳವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈದ್ ಮೀಲಾದ್ ಅಂಗವಾಗಿ ನಗರದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಧಾರ್ಮಿಕ ಗೀತೆಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದರು. ಈದ್ ಮಿಲಾದ್ ಅಂಗವಾಗಿ ಮಕ್ಕಾ, ಮದೀನ ಚಿತ್ರ ಪಟಗಳನ್ನು ಇಟ್ಟುಕೊಂಡು ಮೆರವಣಿಗೆ ಮಾಡಲಾಯಿತು. ಇನ್ನು ಕೆಲವು ಕಡೆಗಳಲ್ಲಿ ಮಹ್ಮದ್ ಪೈಗಂಬರ್ ಹಾಗೂ ಇಸ್ಲಾಂ ಧರ್ಮದ ಕುರಿತಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಮಂಗಳವಾರ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನುಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಎಲ್ಲ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮಕ್ಕ, ಮದೀನಾ ಭಾವಚಿತ್ರಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಪರಸ್ಪರ ಅಭಿನಂದಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮುಸ್ಲಿಂ ಬಾಂಧವರು ತಮ್ಮ, ತಮ್ಮ ಮಸೀದಿಗಳಿಂದ ಪ್ರತ್ಯೇಕವಾಗಿ ಮೆರವಣಿಗೆಯಲ್ಲಿ ಬಂದು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಂಗಮಗೊಂಡರು. ಅಲ್ಲಿಂದ ಬಸವೇಶ್ವರ ಬಜಾರ್ನಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಾಸಕ ಎಸ್. ಭೀಮಾನಾಯ್ಕ ಮುಸ್ಲಿಂ ಬಾಂಧವರಿಗೆ ಶುಭಕೋರಿ, ಹಿಂದೂ ಮುಸ್ಲಿಂರು ಏಕತೆಯಿಂದ ಸಹಬಾಳ್ವೆ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಸ್ನೇಹದಿಂದ ಬದುಕು ರೂಪಿಸಿಕೊಳ್ಳುವುದು ಸಮಾಜದ ಒಳಿತಿಗೆ ಬುನಾದಿ ಇದ್ದಂತೆ. ಅದ್ದರಿಂದ ನಾವೆಲ್ಲರೂ ನಮ್ಮ ಧರ್ಮಗಳನ್ನು ಪ್ರೀತಿಸುವ ಮೂಲಕ ರಾಷ್ಟ್ರದ ಸಮಗ್ರತೆ, ಏಕತೆಗೆ ಭದ್ರ ಅಡಿಪಾಯ ಹಾಕುವುದು ಅಗತ್ಯವಿದೆ ಎಂದರು.
ಮುಸ್ಲಿಂ ಸಮಾಜದ ಮುಖಂಡರಾದ ನೆಲ್ಲು ಇಸ್ಮಾಯಿಲ್, ಎಣ್ಣಿ ಇಬ್ರಾಹಿಂ, ತತ್ತಿ ಖಾಸೀಂ, ಕೋಳಿ ಹುಸೇನ್, ಆಟೋ ರಜಾಕ್, ಎಚ್. ಜಂದೀಸಾಬ್, ಕೊಲ್ಮಿ ರೆಹಮಾನ್, ಯು. ಬಾಬುವಲಿ, ಯಮನೂರಿ, ಎಣ್ಣಿ ಬಾಷಾ, ಇಮಾಮ್ಸಾಬ್, ಸಾಹುಹಮೀದ್, ಬ್ರೆಡ್ ನಜೀರ್, ಮದಾರ್ಸಾಬ್, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಎಚ್.ಎಂ. ಚೋಳರಾಜ, ಸಿನಿಮಾ ಮಂಜಣ್ಣ, ಹನಸಿ ದೇವರಾಜ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಹುಡೇದ ಗುರುಬಸವರಾಜ, ಆರ್. ವೆಂಕಟೇಶ್, ಹೆಗ್ಡಾಳ ಶ್ರೀನಿವಾಸಶೆಟ್ಟಿ, ಹಂಚಿನಮನಿ ಹನುಮಂತಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

