ಹುತಾತ್ಮ ಮಲ್ಲಿಕಾರ್ಜುನ ಬಂಡೆಗೆ ಸಂತಾಪ
ಹೂವಿನಹಡಗಲಿ: ಶೂಟೌಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಹುತಾತ್ಮರಾದ ಗುಲ್ಬರ್ಗ ಜಿಲ್ಲೆ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಪಟ್ಟಣದ ಜನತೆ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಮೇಣದ ಬತ್ತಿ ಬೆಳಗಿಸಿ ಸಂತಾಪ ಸೂಚಿಸಿದರು.
ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಸಂತಾಪ ಸಲ್ಲಿಸಿ ಮಾತನಾಡಿದ ಯುವ ಮುಖಂಡ ಪುತ್ರೇಶ, ದೋಶದ್ರೋಹಿ, ಭೂಗತ ಜಗತ್ತಿನ ಕೊಲೆ ಪಾತಕಿಗಳ ಗುಂಡಿಗೆ ಎದೆಯೊಡ್ಡಿ ಹೋರಾಡಿದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಪೊಲೀಸ್ ಇಲಾಖೆಯ ಅಪ್ರತಿಮ ಹೋರಾಟಗಾರರಾಗಿ ವೀರ ಮರಣ ಹೊಂದಿದ್ದಾರೆ ಎಂದರು.
ಪಿಎಸ್ಐ ಬಂಡೆಯಂತಹ ಪ್ರಾಮಾಣಿಕ ಅಧಿಕಾರಿಗೆ ಸರ್ಕಾರ ಪುಡಿಗಾಸಿನ ಪರಿಹಾರ ಬಿಸಾಕಿ ಕೈ ತೊಳೆದು ಕೊಂಡರೆ ಸಾಲದು ದೇಶದ್ರೋಹಿಗಳನ್ನು ಮಟ್ಟ ಹಾಕಿ ಜನರ ನೆಮ್ಮದಿ ಬದುಕಿಗೆ ದಾರಿ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಗುಲ್ಬರ್ಗ ಜನತೆ 5-6 ದಿನಗಳಿಂದ ಬಂಡೆ ಬದುಕಿ ಬಾ... ಎಂದು ಕಂಡ ಕಂಡ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರೂ ಆ ದೇವರು ಕರುಣೆ ತೋರದೆ ಬಂಡೆ ಅವರು ವೀರಮರಣ ಅಪ್ಪಿದ್ದಾರೆ. ಇವರ ಸಾವಿಗೆ ನೇರವಾಗಿ ಸರ್ಕಾರವೆ ಹೊಣೆಯಾಗಿದ್ದು, ಪ್ರಾಮಾಣಿಕ ಅಧಿಕಾರಿಯೊಬ್ಬರನ್ನು ಕಳೆದುಕೊಂಡು ರಾಜ್ಯಕ್ಕೆ ನಷ್ಟ ಉಂಟಾಗಿದೆ. ನಿಷ್ಠಾವಂತ ಅಧಿಕಾರಿಯನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದ ಬಂಡೆ ಕುಟುಂಬಕ್ಕೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು.
ಸಂತಾಪ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಚ್. ಪೂಜೆಪ್ಪ, ಮಾಜಿ ಪುರಸಭಾ ಉಪಾಧ್ಯಕ್ಷ ಪರಶೆಟ್ಟಿ ಪ್ರಕಾಶ, ಸ್ವಾಮಿ, ಚಿತ್ರನಟ ರಮೇಶ, ಸಿಪಿಐ ಪ್ರಕಾಶ ರಾಠೋಡ್, ಪಿಎಸ್ಐ ಆಂಜನೇಯ, ಎಎಸ್ಐ ಹಳ್ಳಪ್ಪನವರ್ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

