ಹೈಕ ಸ್ಥಾನಮಾನಕ್ಕೆ ಕೈ ಕಾರಣವಲ್ಲ: ಶಶಿಲ್ ನಮೋಶಿ
ಹಗರಿಬೊಮ್ಮನಹಳ್ಳಿ: ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸಂವಿಧಾನದ ವಿಶೇಷ 371ನೇ(ಜೆ) ಕಲಂ ಸೌಲಭ್ಯ ಸಿಗುವಂತಾಗಲು ಈ ಭಾಗದ ಎಲ್ಲ ಪಕ್ಷಗಳ ಮತ್ತು ಹೋರಾಟಗಾರರ ಅವಿರತವಾದ ಶ್ರಮವೇ ಕಾರಣ. ಇದು ಕೇವಲ ಕಾಂಗ್ರೆಸ್ನ ಸಾಧನೆಯಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ಇತಿಹಾಸ ವಿಕೃತೀಕರಣ ಹಾಗೂ ಸಂಕಲ್ಪ ಬೋಧನಾ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಹೈಕ ಪ್ರದೇಶಕ್ಕೆ ಸಿಕ್ಕಿರುವ ಸಂವಿಧಾನಬದ್ಧ ವಿಶೇಷ ಸ್ಥಾನಮಾನದ ಕ್ರೇಡಿಟ್ ಅನ್ನು ಸಂಪೂರ್ಣವಾಗಿ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಈ ಭಾಗದಲ್ಲಿ ಹಲವು ದಶಕಗಳಿಂದಲೂ ನಿರಂತರವಾದ ಹೋರಾಟ, ಪ್ರತಿಭಟನೆಗಳು ಸರಣಿಯೋಪಾದಿಯಲ್ಲಿ ನಡೆದು ರಾಜ್ಯ, ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದ ಫಲವೇ ಅಂತಿಮವಾಗಿ ನಮಗೆ ಸಂವಿಧಾನಬದ್ಧ ಸ್ಥಾನಮಾನ ಸಿಗುವಂತಾಗಿದೆ ಎಂಬುವುದನ್ನು ಜನತೆ ಅರಿತುಕೊಳ್ಳುವುದು ಅಗತ್ಯವಿದೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯಾಧ್ಯಕ್ಷ ಡಾ. ವಿಠಲ್ ಮಾತನಾಡಿದರು. ಮಾಜಿ ಎಂಎಲ್ಸಿ. ಕೃ. ನರಹರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮನಗೌಡ, ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಗುಂಡಾಚಾರ್, ತಾಲೂಕಾಧ್ಯಕ್ಷ ಎಸ್.ಸಿ. ಬಂಡಿವಾಡ, ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಲೋಕೇಶ್, ಕಾರ್ಯದರ್ಶಿ ಸಿದ್ದೇಶ್ವರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಜ್ಞಾನೇಶ್ವರಯ್ಯ, ಸಂಘದ ರಾಜ್ಯ ಉಪಾಧ್ಯಕ್ಷ ಆರ್. ಕೊಟ್ರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

