ಇಂದು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಬಳ್ಳಾರಿ: ಪ್ರಥಮ ಬಾರಿಗೆ ಲೆಕ್ಕ ಪರಿಶೋಧಕರ ಸಂಘದ ವತಿಯಿಂದ ಕಾದಂಬರಿಕಾರ, ಲೆಕ್ಕಪರಿಶೋಧಕ ಯಂಡಮೂರಿ ವೀರೇಂದ್ರನಾಥ್ ಅವರಿಂದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಕೌಶಲ್ಯ ಅಭಿವೃದ್ಧಿ ಕುರಿತಾದ ಕಾರ್ಯಕ್ರಮ ಜ. 21ರಂದು ನಗರದ ಬಸವಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲೆಕ್ಕ ಪರಿಶೋಕರ ಸಂಘದ ಅಧ್ಯಕ್ಷ ಕೆ. ರಾಜಶೇಖರ್ ಹಾಗೂ ಮಾಜಿ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ.
ನಗರದ ಸಿಎ ಸಂಘದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದಾಗಿ ಇಂತಹ ಕಾರ್ಯಕ್ಕೆ ಸಂಘ ಮುಂದಾಗಿದೆ. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಚಿತ್ರನಿರ್ದೇಶಕ, ಕಾದಂಬರಿಕಾರ ವೀರೇಂದ್ರನಾಥ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಲೆಕ್ಕ ಪರಿಶೋಧಕರ ಸಂಘ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಲೆಕ್ಕ ಪರಿಶೋಧಕ ಕೋರ್ಸ್ಗೆ ಕಠಿಣ ಪರಿಶ್ರಮ ಬೇಕು. ಅಂದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಗ್ರಾಮಾಂತರ ಪ್ರದೇಶದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗಣಿತದಲ್ಲಿ ಹೆಚ್ಚಿನ ಜ್ಞಾನವುಳ್ಳವರಾಗಿದ್ದು, ಸಿಎ ಸಹಕಾರಿಯಾಗಲಿದೆ. ಮಕ್ಕಳು ವೈದ್ಯರಾಗಲಿ, ಎಂಜಿನಿಯರ್ ಆಗಲಿ ಎಂದು ಪೋಷಕರು ಬಯಸುತ್ತಾರೆ. ಆದರೆ ಸಿಎ ಓದಿದವರಿಗೆ ಉದ್ಯೋಗ ಕಟ್ಟಿಟ್ಟ ಬುತ್ತಿ. ದೇಶದಲ್ಲಿ 2,35,000 ಲೆಕ್ಕ ಪರಿಶೋಧಕರಿದ್ದಾರೆ. 10 ಸಾವಿರ ಲೆಕ್ಕ ಪರಿಶೋಧಕರು ಬೇರೆ ಬೇರೆ ದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು 2.65 ಲಕ್ಷ ಸಿಎಗಳು ಅಗತ್ಯ ಇದೆ. ಇನ್ನು ಸಿಎ ಕೋರ್ಸ್ ಪೂರ್ಣಗೊಳಿಸಲು ಕೇವಲ ರು. 48 ಸಾವಿರ ಸಾಕಾಗುತ್ತವೆ. ಪೋಷಕರು ಎಚ್ಚೆತ್ತುಕೊಂಡು ಮಕ್ಕಳಿಗೆ ಸಿಎ ಶಿಕ್ಷಣ ಕೊಡಿಸಬೇಕು ಎಂದರು.
ದೇಶದಲ್ಲಿ ಸಿಎ ಪಠ್ಯಕ್ರಮ ಬೇರೆ ದೇಶಗಳಿಗೆ ಹೋಲಿಸಿದರೆ ವಿಸ್ತಾರವಾಗಿರುತ್ತದೆ. ಇಲ್ಲಿ ಸಿಎ ಮಾಡಿದವರು, ಯಾವ ದೇಶದಲ್ಲಾದರೂ ಕೆಲಸ ನಿರ್ವಹಿಸುವುದು ಸುಲಭ ಸಾಧ್ಯ. ಬೇರೆ ದೇಶಗಳಲ್ಲಿ ಭಾರತದ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಬೇಡಿಕೆ ಇದೆ. ಜಿಂದಾಲ್ವೊಂದರಲ್ಲಿ 32 ಲೆಕ್ಕಪರಿಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದಿಂದ ಪ್ರತಿವರ್ಷ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳಿಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಲೆಕ್ಕ ಪರಿಶೋಧಕ ಸಂಘದ ಎಂ. ಲಕ್ಷ್ಮಿನಾರಾಯಣ, ಭರತ್ಕುಮಾರ್ ಜೆ. ಗುಪ್ತಾ, ಬಿ. ರಾಮಕೃಷ್ಣ, ಸಿದ್ದರಾಮೇಶ್ವರಗೌಡ, ರಾಜೇಶ್ ಬಾಗ್ರೇಚಾ ಸುದ್ದಿಗೋಷ್ಠಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

