ಬಳ್ಳಾರಿ

ಅಲ್ಲಲ್ಲಿ 65ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 28
65ನೇ ಗಣರಾಜ್ಯೋತ್ಸವವನ್ನು ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು. ಜಿಲ್ಲೆಯ ಕುರುಗೋಡು ಪಟ್ಟಣದ ಬಾಲಕರ ಸರ್ಕಾರಿ ಕ್ರೀಡಾಂಗಣದಲ್ಲಿ ವಿಶೇಷ ತಹಸೀಲ್ದಾರ್ ಸುರೇಶ್‌ಬಾಬು ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಸ್ಕೌಟ್ಸ್, ಗೃಹರಕ್ಷಕ ದಳ, ವಿವಿಧ ಕಾಲೇಜು ವಿದ್ಯಾರ್ಥಿಗಳ ಪಥಸಂಚಲನ ನಡೆಯಿತು. ಗ್ರಾಪಂ ಅಧ್ಯಕ್ಷೆ ಎನ್. ಸಣ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ್ ವಿಶ್ವನಾಥ್, ಗೃಹರಕ್ಷಕ ದಳದ ಅಧಿಕಾರಿ ನಾಗರಾಜ್, ಜಿಪಂ ಸದಸ್ಯೆ ಎನ್.ಎಂ. ಗಾಯಿತ್ರಮ್ಮ, ತಾಪಂ ಸದಸ್ಯೆ ಗಾಳೆಮ್ಮ, ಚಂದ್ರಾಯಿ ಹನುಮಂತಮ್ಮ, ಪ್ರಾಚಾರ್ಯ ವೇಣುಗೋಪಾಲ್, ರವೀಂದ್ರ, ಗ್ರಾಪಂ ಸದಸ್ಯರು, ಪಟ್ಟಣದ ಮುಖಂಡರು ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ಮುಖಂಡ ಟಿ. ವಿರೂಪಾಕ್ಷ, ಹುಸೇನ್ ಬಾಷಾ, ಗುರುಬಸವರಾಜ್, ಪಿ. ಹೊನ್ನೂರುಸಾಬ್, ಕೊಟ್ರೇಶ್, ಗ್ರಾಪಂ ಸದಸ್ಯರು, ನಾನಾ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರು, ಇದ್ದರು. ಶಿಕ್ಷಕ ನೀಲಕಂಠ, ಭೀಮಣ್ಣ, ನಿರ್ವಹಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಗೃಹರಕ್ಷಕ ದಳ: ಜಿಲ್ಲಾ ಹಾಗೂ ತಾಲೂಕು ಗೃಹರಕ್ಷಕ ದಳದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಗೃಹರಕ್ಷಕ ದಳದ ತರಬೇತಿ ಕೇಂದ್ರದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಸಮಾದೇಷ್ಟ ಎಂ.ಎ. ಷಕೀಬ್ ಧ್ವಜಾರೋಹಣ ನೆರವೇರಿಸಿ, ಸಂವಿಧಾನದ ಮಹತ್ವದ ಬಗ್ಗೆ ತಿಳಿಸಿದರು. ಎಸ್.ಎ. ವಾಹೀದ್, ಎನ್.ಎಸ್. ಲಕ್ಷ್ಮೀನರಸಿಂಹ, ಎಚ್. ತಿಪ್ಪೇಸ್ವಾಮಿ, ಗೃಹರಕ್ಷಕ ದಳ ಅಧಿಕಾರಿ ಜಿ. ಬಸವರಾಜ್, ಸುರೇಶ್, ಬಸವಲಿಂಗ, ಗೃಹಕರಕ್ಷಕರು ಭಾಗವಹಿಸಿದ್ದರು.
ಪುಸ್ತಕ ವಿತರಣೆ: ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ಆದಿ ಎಜ್ಯುಕೇಶನ್ ಅಂಡ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನಿಂದ ನಗರದ ಹವಂಬಾವಿ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಬ್ದಕೋಶ ಪುಸ್ತಕಗಳನ್ನು ವಿತರಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಎಸ್. ರಾಘವೇಂದ್ರ, ಎಸ್.ಎಂ. ಈರೇಶ್ ಕುಮಾರ್, ಗಂಗಪ್ಪ, ಕುರುವಳ್ಳಿ ಗುರುಸಿದ್ದೇಶ್ವರ, ಶಾಲೆಯ ಮುಖ್ಯೋಪಾಧ್ಯಾಯ, ಸಿಬ್ಬಂದಿ ಇದ್ದರು.
ಪ್ರಾಥಮಿಕ ಶಾಲೆಯಲ್ಲಿ: ಸ್ಥಳೀಯ ಹನುಮಾನ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲೆಗೆ ದಾನ ನೀಡಿದ ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಶ್, ನೇಲಪಾಟಿ ಶ್ರೀನಿವಾಸುಲು, ಎಂ. ರಾಮಾಂಜಿನಿ, ಡಿ. ಸೂರಿ ಅವರನ್ನು ಸನ್ಮಾನಿಸಲಾಯಿತು. ಡಿ. ಗಂಗಾಧರ, ಡಿ. ಮಲ್ಲಿಕಾರ್ಜುನ, ಕೆ.ಸಿ. ಸುರೇಶಬಾಬು, ಎಂ. ರಾಮಾಂಜಿನಿ, ಸುರೇಶ, ಉಮಾಶಂಕರ, ಬಿ.ಜಿ. ಮಂಜುನಾಥ, ಬಷೀರ್ ಅಹ್ಮದ್, ಜಿ.ಆರ್. ಚಂದ್ರಣ್ಣ, ಕೆ.ಪಿ. ಓಂಕಾರೇಶ್ವರ ಇತರರಿದ್ದರು.
ಬಾಣಾಪುರ ಶಾಲೆ: ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 65ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಸ್. ಮಲ್ಲನಗೌಡ ಧ್ವಜಾರೋಹಣ ನೆರವೇರಿಸಿದರು. ಕ್ರೀಡೆಗಳಲ್ಲಿ ವಿಜೇತ ಮಕ್ಕಳಿಗೆ ಜೈ ಕನ್ನಡ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಕೆ. ಪೊಂಪನಗೌಡ ಬಹುಮಾನ ವಿತರಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಸರ್ಕಾರದ ಸಹಾಯಧನ ರು. 15 ಸಾವಿರ, ರು. 7 ಸಾವಿರ, ರು. 5 ಸಾವಿರದ ಚೆಕ್‌ಗಳನ್ನು ವಿತರಿಸಿದರು. ಜಿ. ದೊಡ್ಡಬಸಪ್ಪ, ಎಸ್.ಬಿ. ವಾಗೀಶ್, ರಮೇಶ ಅಗಸಿ, ಪ್ರಕಾಶ್, ಎಸ್. ದೇವರಾಜ, ಹರೀಶ್, ಪ್ರೌಢಶಾಲೆ ಮುಖ್ಯಗುರು ಜೆ. ಮದ್ದಾನಪ್ಪ, ಪ್ರಾಥಮಿಕ ಶಾಲೆ ಮುಖ್ಯಗುರು ಪಿ. ಶ್ರೀದೇವಿ, ಸಿಬ್ಬಂದಿ, ಇತರರಿದ್ದರು.
ಸೃಷ್ಟಿ ಸೇವಾ ಸಂಘದಿಂದ: ಸೃಷ್ಟಿ ಸೇವಾ ಸಂಘದ ವತಿಯಿಂದ ನಡೆದ 65ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಟಿ. ಮಲ್ಲಿಕಾರ್ಜುನ ನೆರವೇರಿಸಿದರು. ಮಹಾನಗರ ಪಾಲಿಕೆಯ ಸುವರ್ಣ ಶಹರಿ ರೋಜಗಾರ ಯೋಜನೆಯ ಸಮುದಾಯ ಸಂಘಟಕಿ ಎಂ. ಜ್ಯೋತಿ, ಎನ್.ವಿ. ಶಿವಣ್ಣ, ಕೇಶವಲು, ಹರೀಶ್, ಮಲ್ಲಯ್ಯ, ಗಾದಿಲಿಂಗ ಸೇರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.