ಖರೀದಿ ಕೇಂದ್ರಕ್ಕೆ ಐಎಎಸ್ ಅಧಿಕಾರಿ ಭೇಟಿ
ಹೂವಿನಹಡಗಲಿ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಆರಂಭಿಸಿರುವ ಮೆಕ್ಕೆಜೋಳ ಖರೀದಿ ಕೇಂದ್ರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಐಎಎಸ್ ಅಧಿಕಾರಿ ಭೇಟಿ ನೀಡಿ, ಗುರುವಾರ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಂಡಿದ್ದಾರೆ.
25 ದಿನಗಳಿಂದ ಮೆಕ್ಕೆಜೋಳ ಖರೀದಿ ಇಲ್ಲದೆ ರೈತರು ಕಂಗಾಲಾಗಿದ್ದು, ಸೋಮವಾರ ನೋಡಲ್ ಅಧಿಕಾರಿ ವಿಠಲ್ರಾವ್ ಭೇಟಿ ನೀಡಿ ಎಲ್ಲ ವರದಿ ಸಿದ್ಧಪಡಿಸಿರುವ ಬೆನ್ನಲ್ಲೆ ಸರ್ಕಾರ ಐಎಎಸ್ ಅಧಿಕಾರಿ ನಿತೀಶ್ ಪಾಟೀಲ್ರನ್ನು ಕಳುಹಿಸಿದ್ದು, ಖರೀದಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಈವರೆಗೂ ಖರೀದಿಯಾಗಿರುವ ಮೆಕ್ಕೆಜೋಳ ಸಂಗ್ರಹಕ್ಕೆ ಗೋದಾಮು ಲಭ್ಯತೆ ಇಲ್ಲದ ಕಾರಣ ಬಯಲಿನಲ್ಲೆ ಹಾಕಲಾಗಿತ್ತು. ರೈತರು ಖರೀದಿಗೆ ತಂದಿರುವ ಮೆಕ್ಕೆಜೋಳ ಬಯಲಿನಲ್ಲೆ ಇದೆ. ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿನೆ ನೀಡಿದರು.
ಈ ಕುರಿತು ಐಎಎಸ್ ಅಧಿಕಾರಿ ನಿತೀಶ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣ ಹಾಗೂ ಹೊರವಲಯದಲ್ಲಿರುವ ಖಾಸಗಿ ಗೋದಾಮುಗಳನ್ನು ಪಡೆದು ಖರೀದಿ ಕೇಂದ್ರವನ್ನು ಗುರುವಾರದಿಂದ ಆರಂಭಿಸಲಾಗುವುದು. ಸರ್ಕಾರ ಆದೇಶದ ಪ್ರಕಾರ ಪ್ರತಿ ರೈತರ 75 ಕ್ವಿಂಟಲ್ ಮೆಕ್ಕೆಜೋಳ ಮಾತ್ರ ಖರೀದಿ ಮಾಡಲಾಗುವುದು. ಇದರಲ್ಲಿ ಯಾವುದೆ ಬದಲಾವಣೆ ಇಲ್ಲ. ಸರ್ಕಾರ ಕ್ರಮ ಕೈಗೊಳ್ಳುವವರೆಗೂ 75 ಕ್ವಿಂಟಲ್ಗೂ ಹೆಚ್ಚು ಖರೀದಿ ಮಾಡಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು. ಖರೀದಿ ಕೇಂದ್ರದ ತನಿಖಾಧಿಕಾರಿಯಾಗಿ ಭೇಟಿ ನೀಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ವಾಸ್ತವ ಸಮಸ್ಯೆಯನ್ನು ತಿಳಿಯಲು ಕಳುಹಿಸಿದ್ದಾರೆ. ಇಲ್ಲೇನು ಅಂತಹ ಸಮಸ್ಯೆ ಉದ್ಭವಿಸಿಲ್ಲ. ರೈತರಿಗೆ ಯಾವುದೆ ಸಮಸ್ಯೆ ಆಗದಂತೆ ಬುಧವಾರ ಅಥವಾ ಗುರುವಾರ ಯಾವುದೆ ಕಾರಣಕ್ಕೂ ಬಿಡದಂತೆ ಖರೀದಿ ಕೇಂದ್ರ ಆರಂಭಿಸಲಾಗುವುದು. ಹೂವಿನಹಡಗಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ದಾವಣಗೆರೆ ಉಗ್ರಾಣ ನಿಗಮ ಸಿಬ್ಬಂದಿ ಹಾಗೂ ಆಹಾರ ನಿಗಮದ ವ್ಯವಸ್ಥಾಪದ ಶಿವಪ್ಪ ಕುರಿ ಇವರನ್ನು ಖರೀದಿ ಕೇಂದ್ರ ಅಧಿಕಾರಿಗಳನ್ನಾಗಿ ಸರ್ಕಾರ ನೇಮಿಸಿದೆ ಎಂದರು. ಖರೀದಿ ಕೇಂದ್ರದಲ್ಲಿ ಕೆಲವು ಮಧ್ಯವರ್ತಿಗಳು ಗೊಂದಲ ಸೃಷ್ಠಿಸಿದ್ದಾರೆ. ವೇ ಬ್ರಿಡ್ಜ್ ತೂಕ ಮಾಡಲು ಅವಕಾಶವಿಲ್ಲ. ಪ್ರತಿ ಚೀಲ 51 ಕೆಜಿ ತೂಕ ಇರುವಂತೆ ಗುಣಮಟ್ಟದ ಚೀಲ ತುಂಬಬೇಕೆಂಬ ನಿರ್ದೇಶನ ಇರುವುದರಿಂದ ವೇ ಬ್ರಿಡ್ಜ್ ತೂಕ ಮಾಡಲು ಬರಲ್ಲವೆಂದು ನೋಡಲ್ ಅಧಿಕಾರಿ ವಿಠಲ್ರಾವ್ ತಿಳಿಸಿದರು. ಪ್ರಭಾರಿ ತಹಸೀಲ್ದಾರ್ ಪ್ರಾಣೇಶ, ಆಹಾರ ನಿಗಮದ ವ್ಯವಸ್ಥಾಪಕ ಶಿವಪ್ಪ ಕುರಿ, ಎಪಿಎಂಸಿ ಕಾರ್ಯದರ್ಶಿ ಮಹಾಂತೇಶ ಪಾಟೀಲ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

