ಬಳ್ಳಾರಿ

ಸೊಸೆ ಮೇಲೆ ಅತ್ಯಾಚಾರ, 3 ತಿಂಗಳು ಸಂಸಾರ!

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜು. 19
ಸೊಸೆಯ ಮೇಲೆ ಮಾವನೇ ಅತ್ಯಾಚಾರ ನಡೆಸಿದ್ದಾನೆ. ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಆಕೆಯನ್ನು ಮೈಸೂರಿಗೆ ಕರೆದೊಯ್ದು ಮೂರು ತಿಂಗಳು ಸಂಸಾರ ಮಾಡಿದ್ದಾನೆ. ಈಗ ಗ್ರಾಮಕ್ಕೆ ಮರಳಿರುವ ಸೊಸೆ, ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಇಂತಹ ವಿಲಕ್ಷಣ ಘಟನೆ ನಡೆದಿದ್ದು ತಾಲೂಕಿನ ಐಗಳ ಮಲ್ಲಾಪುರ ಗ್ರಾಮದಲ್ಲಿ. ಚೆನ್ನಿಗಪ್ಪ (53) ಎಂಬಾತ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮಗನ ಹೆಂಡತಿಯನ್ನೇ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ಚೆನ್ನಿಗಪ್ಪನ ಪತ್ನಿಗೆ ಗೊತ್ತಿದ್ದರೂ, 'ನನ್ನ ಗಂಡನನ್ನು ನೀನೇ ಬುಟ್ಟಿಗೆ ಹಾಕಿಕೊಂಡಿದ್ದೀಯ' ಎಂದು ಸೊಸೆಯನ್ನೇ ದೂರಿದ್ದಾಳೆ. ಆದರೆ, ಮನೆಯ ಇತರ ಸದಸ್ಯರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಚೆನ್ನಿಗಪ್ಪ ಸೊಸೆಯನ್ನು ಬಲವಂತವಾಗಿ ಮೈಸೂರು ಜಿಲ್ಲೆಯ ಕೆ.ಆರ್. ಪೇಟೆ ತಾಲೂಕು ಬೂಕನಕೆರೆ ಗ್ರಾಮಕ್ಕೆ ಕರೆದೊಯ್ದು, ಅಲ್ಲಿ ಮನೆ ಮಾಡಿ ಸಂಸಾರ ನಡೆಸಿದ್ದಾನೆ.
ಊರಲ್ಲಿದ್ದ ತನ್ನ ಐದು ವರ್ಷದ ಮಗನ ನೆನಪಾಗಿ ಸೊಸೆ, ತನ್ನನ್ನು ಊರಿಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದಾಳೆ. ವಾರದ ಹಿಂದಷ್ಟೇ ಆಕೆಯನ್ನು ಊರಿಗೆ ಕರೆತಂದ ಚೆನ್ನಿಗಪ್ಪ, ತೋಟದ ಮನೆಯಲ್ಲಿ ಇರಿಸಿದ್ದಾನೆ. ಗಂಡ ಇನ್ನೊಂದು ಮದುವೆ ಆಗಿರುವುದರಿಂದ ಕಂಗಾಲಾದ ಈ ಮಹಿಳೆ ಅದು ಹೇಗೋ ತನ್ನ ತವರು ಮನೆಯವರು ಹಾಗೂ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಚೆನ್ನಿಗಪ್ಪನನ್ನು ಥಳಿಸಿದ್ದಾರೆ. ಆತ ಈಗ ತಲೆ ಮರೆಸಿಕೊಂಡಿದ್ದಾನೆ.
ಗ್ರಾಮಸ್ಥರ ಸಹಾಯದಿಂದ ಮಹಿಳೆ ಗುರುವಾರ ರಾತ್ರಿ ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿ ಠಾಣೆಯಲ್ಲಿ ಮಾವ ಮತ್ತು ಗಂಡನ ಅಣ್ಣನ ಮೇಲೆ ದೂರು ನೀಡಿದ್ದಾಳೆ. ಕೂಡ್ಲಿಗಿ ಡಿವೈಎಸ್ಪಿ ಗಜಕೋಶ್, ಕೊಟ್ಟೂರು ಸಿಪಿಐ ಲಾಲ್ಯಾನಾಯ್ಕ, ಹೊಸಹಳ್ಳಿ ಪಿಎಸ್‌ಐ. ರಘುನಾಥ ಐಗಳ ಮಲ್ಲಾಪುರ ಗ್ರಾಮಕ್ಕೆ ಆಗಮಿಸಿ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.