ಜಾನಪದ ಲೋಕಕ್ಕೆ ಡಾ. ಮಲಶೆಟ್ಟಿ ಕೊಡುಗೆ ಅಪಾರ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 21
ದಿ. ಡಾ. ಬಸವರಾಜ ಮಲಶೆಟ್ಟಿ ನಾಡಿನ ಅನೇಕ ವೈವಿಧ್ಯಮಯ ಜಾನಪದ ಕಲೆಗಳನ್ನು ಆಳವಾಗಿ ಅಧ್ಯಯನ ಮಾಡಿ ಜಾನಪದ ಜಂಗಮನಾಗಿ ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಹೇಳಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದಿ. ಡಾ. ಬಸವರಾಜ ಮಲಶೆಟ್ಟಿ ಕುಟುಂಬ, ನುಡಿ ನಮನ ಸಮಿತಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಬಸವರಾಜ್ ಮಲಶೆಟ್ಟಿ ಉತ್ತರ- ದಕ್ಷಿಣ ಕರ್ನಾಟಕ ಸೇರಿದಂತೆ ಕರಾವಳಿ, ಬುಡಕಟ್ಟು ಪ್ರದೇಶಗಳ ಜಾನಪದ ಕಲೆಗಳನ್ನು ಆಳವಾಗಿ ಅಭ್ಯಸಿಸಿ ಕರಗತ ಮಾಡಿಕೊಂಡಿದ್ದರು. ಆ ಕಲೆಗಳ ಕುರಿತು ವಿಮರ್ಶಿಸುವ ವೈಶಿಷ್ಟ್ಯ ಪೂರ್ಣ ಜ್ಞಾನ ಹೊಂದಿದ್ದರು. ಅವರು ಜಾನಪದ ಕ್ಷೇತ್ರದ ಬಗ್ಗೆ ಒಂದು ವಿವಿ ಪ್ರಾಧ್ಯಾಪಕರಿಗೆ ಬೇಕಾದ ಸಮಗ್ರ ಮಾಹಿತಿ ನೀಡುವಷ್ಟು ಜ್ಞಾನ ಸಂಪಾದಿಸಿದ್ದರು. ಪ್ರತಿಯೊಬ್ಬರೊಂದಿಗೂ ಬೆರೆತು, ಪ್ರೀತಿ-ವಿಶ್ವಾಸ ಗಳಿಸಿಕೊಂಡಿದ್ದ ಅಪರೂಪದ ಗುರುಗಳಾಗಿದ್ದ ಅವರು, ಅಪಾರ ಶಿಷ್ಯರ ಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಅವರ ಆಶಯದಂತೆ ಜಾನಪದ ಲೋಕ ಶ್ರೀಮಂತಗೊಳಿಸಿದರೆ ಅವರಿಗೆ ನುಡಿ ನಮನ ಸಲ್ಲಿಸಿದಂತಾಗುತ್ತದೆ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಡಾ. ಬಾಳಪ್ಪ ಶೀಗೆಳ್ಳಿ, ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಮಾತನಾಡಿದರು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ಸಂಡೂರು ವಿರಕ್ತಮಠದ ಪ್ರಭು ಶ್ರೀ ಆಶೀರ್ವಚನ ನೀಡಿದರು.
ಮೇಟಿ ಕೊಟ್ರಪ್ಪ, ಉಮಾಪತಿಗೌಡ, ಪಲ್ಲವಿ ಮಲಶೆಟ್ಟಿ, ಶಾರದಾ ಮಲಶೆಟ್ಟಿ, ದಿ, ಬಸವರಾಜ ಅವರ ಸ್ನೇಹಿತರು, ಅಭಿಮಾನಿಗಳು, ಶಿಷ್ಯರು ಇದ್ದರು. ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ, ಡಾ. ಮೃತ್ಯುಂಜಯ ರುಮಾಲೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

