ವಿದ್ಯಾರ್ಥಿನಿಯರು ಆಮಿಷಗಳಿಗೆ ಬಲಿಯಾಗಬೇಡಿ
ಹೊಸಪೇಟೆ: ವಿದ್ಯಾರ್ಥಿನಿಯರು ಪರಿಚಿತರು, ಅಪರಿಚಿತರು ಒಡ್ಡುವ ಆಸೆ- ಆಮಿಷಗಳಿಗೆ ಬಲಿಯಾಗಿ ದೌರ್ಜನಕ್ಕೆ ಒಳಗಾಗದೆ ಜಾಗ್ರತೆಯಿಂದ ಇರಬೇಕೆಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಕೆ. ಜಯಪ್ರಕಾಶ್ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಶಾಲೆ-ಕಾಲೇಜುಗಳಿಗೆ ತೆರಳುವಾಗ ರಸ್ತೆ ಅಥವಾ ಶಾಲಾ ಆವರಣದಲ್ಲಿ ಕಾಮುಕರು ಅಥವಾ ಪಡ್ಡೆ ಹುಡುಗರು ತೊಂದರೆ ನೀಡಿದರೆ ತಕ್ಷಣ ಶಾಲಾ ಶಿಕ್ಷಕರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿ. ಯಾವುದೇ ಸಂದರ್ಭದಲ್ಲಿ ಸಂಕಷ್ಟ ಅಥವಾ ದೌರ್ಜನ್ಯಕ್ಕೆ ಒಳಗಾದಾಗ ತಕ್ಷಣ ಪೊಲೀಸರಿಗೆ ಸಹಾಯವಾಣಿ 08394-244030, ಮೊ. 9480803064, 9480803036, 9480803022, 9480803001 ಕರೆ ಮಾಡಿ ದೂರು ನೀಡಿ ಎಂದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್. ಸತ್ಯನಾರಾಯಣ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಕಚಟಿ ಸೋಮಣ್ಣ, ಪ್ರಾಚಾರ್ಯ ಎಂ. ಅಶೋಕ, ಮುಖ್ಯಗುರುಗಳಾದ ಡಿ. ಯಮನೂರಪ್ಪ, ಭೋಜರಾಜ, ಗಾದಿಲಿಂಗಪ್ಪ ಇತರರು ಇದ್ದರು.
ಶೋಭಾ ಪ್ರಾರ್ಥಿಸಿದರು. ಉಪನ್ಯಾಸಕ ಪಿ. ರಾಮಚಂದ್ರ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

