ಬಳ್ಳಾರಿ

ಭರಪೂರ ರಂಜನೆ ಒದಗಿಸಿದ 'ಕತ್ತಲೆ ರಾಜ್ಯದ ಮೂರ್ಖರಾಜ'

Published On :

ಬಳ್ಳಾರಿ: ಜ್ಞಾನ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕೃತಿಕ ಉತ್ಸವ ನಿಮಿತ್ತ ಸ್ಥಳೀಯ ರಾಘವ ಕಲಾ ಮಂದಿರದಲ್ಲಿ ಭಾನುವಾರ ಸಂಜೆ 'ಕತ್ತಲೆ ರಾಜ್ಯದ ಮೂರ್ಖರಾಜ' ಹಾಸ್ಯ ನಾಟಕ ಪ್ರದರ್ಶನಗೊಂಡಿತು.
ಹಿರಿಯ ರಂಗ ಕಲಾವಿದ ರಮೇಶ್ ಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿ, ಹಾಸ್ಯ ನಾಟಕಗಳು ಪ್ರಸ್ತುತ ಕಡಿಮೆಯಾಗುತ್ತಿವೆ. ಇಂತಹದರಲ್ಲಿ ಹೊಸ ಕಲಾವಿದರು ಹಾಸ್ಯ ನಾಟಕ ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿದರು. ಜ್ಞಾನಸೇವಾ ಸಮಿತಿ ಗೌರವ ಅಧ್ಯಕ್ಷ ವಿಷ್ಣುತೀರ್ಥ ಕಲ್ಲೂರ್‌ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ. ಚೆನ್ನಪ್ಪ, ನಗರ ಡಿವೈಎಸ್ಪಿ ಮುರುಗಣ್ಣನವರ್, ಸತ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಸತ್ಯನಾರಾಯಣ ರಾವ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ. ಚೆನ್ನಪ್ಪ, ರಾಘವ ಕಲಾ ಮಂದಿರದ ಅಧ್ಯಕ್ಷ ಸಿದ್ಧನಗೌಡ, ಜ್ಞಾನಸೇವಾ ಸಮಿತಿ ಸದಸ್ಯರಾದ ಶ್ರೀನಿವಾಸ್, ಹರಿ ಕುಮಾರ್, ಅನುಲ್, ರಾಜಾರಾವ್ ಹಾಗೂ ಇತರರು ಇದ್ದರು. ನಾಟಕದಲ್ಲಿ ಜ್ಞಾನ ರಸಮಂಜರಿ ಕಲಾ ಬಳಗದ ಹರಿಪ್ರಸಾದ್, ಅನಂತ, ರಾಮಾಂಜಿನಿ, ನಾಡಂಗ ಬಸವರಾಜ್, ಅಮರಾಪುರ ನಾಗರಾಜ್, ಉದಯ ಅಗಸುನೂರು, ದೇವರಾಜ್, ತಾಯಣ್ಣ ಅಭಿನಯಿಸಿದ್ದರು. ಇದೇ ವೇಳೆ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಿಂದ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರಾದ ಸುಹಾಸಿನಿ ಕುಲಕರ್ಣಿ, ನಾಗಶ್ರೀ, 10ಕ್ಕೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಜಿಲ್ಲಾ ಯುವಜನ ಕ್ರೀಡಾ ಇಲಾಖೆ ನಿವೃತ್ತ ಅಧಿಕಾರಿ ಮಲ್ಲಕಣ್ಣರನ್ನು ಸನ್ಮಾನಿಸಲಾಯಿತು. ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಮಂಜುನಾಥ್ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.