ಬಳ್ಳಾರಿ

ಮಳೆ ಹಾನಿ: ಶೀಘ್ರದಲ್ಲಿ ನಿಯೋಗ ಬೆಂಗಳೂರಿಗೆ

Published On :

ಕಂಪ್ಲಿ:  ಶುಕ್ರವಾರ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಪರಿಹಾರ ದೊರಕಿಸಿಕೊಡಲು ಶೀಘ್ರದಲ್ಲಿಯೆ ಬೆಂಗಳೂರಿಗೆ ನಿಯೋಗ ತೆರಳಿ ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸುವುದರ ಮೂಲಕ ಮನವಿ ಮಾಡಲಾಗುವುದು ಎಂದು  ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಉಪಾಧ್ಯಕ್ಷ, ಪುರಸಭೆ ಸದಸ್ಯ ಎಂ. ಸುಧೀರ್ ತಿಳಿಸಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶುಕ್ರವಾರ ಬೀಸಿದ ಬಿರುಗಾಳಿ ಮತ್ತು ಸುರಿದ ಭಾರಿ ಮಳೆಗೆ 200ಕ್ಕು ಹೆಚ್ಚು ಕುಟುಂಬಗಳು ಮನೆ, ಗುಡಿಸಲುಗಳನ್ನು ಕಳೆದುಕೊಂಡಿವೆ. ಕಂಪ್ಲಿ-ಕೋಟೆ 2 ಸಾವಿರ ಎಕರೆ ಪ್ರದೇಶದ, ರಾಮಸಾಗರ ಗ್ರಾಮದ 1500 ಎಕರೆ ಪ್ರದೇಶದ, ನಂ. 10. ಮುದ್ದಾಪುರ ಗ್ರಾಮದ 500 ಎಕರೆ ಪ್ರದೇಶದ, ನಂ. 5 ಬೆಳಗೋಡುಹಾಳ್ ಗ್ರಾಮದ 250 ಎಕರೆ ಪ್ರದೇಶದ  ಬಾಳೆ ಬೆಳೆಗಾರರು ಮತ್ತು ದೇವಸಮುದ್ರ ಗ್ರಾಮದ ಕುರಿಗಾಯಿಗಳು 30 ಕುರಿಗಳು ಸತ್ತು ಹೋದ ಪರಿಣಾಮ ಅಪಾರ ನಷ್ಟ ಹೊಂದಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಬೆಂಗಳೂರಿಗೆ ನಿಯೋಗ ತೆರಳುವುದಾಗಿ ಅವರು ತಿಳಿಸಿದರು.  
ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಕಂಪ್ಲಿ ಭಾಗದಲ್ಲಿ ಮಳೆ, ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಮುರಿದ ಕಾರಣ ಕಂಪ್ಲಿ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಜೆಸ್ಕಾಂ ಇಲಾಖೆ ತೀವ್ರಗತಿಯಲ್ಲಿ ಕೆಲಸ ಮಾಡಿದ್ದರಿಂದ ಕಂಪ್ಲಿ 13 ವಾರ್ಡ್ಗಳಲ್ಲಿ ಈಗಾಗಲೆ ಕುಡಿಯುವ ನೀರು ಬಿಡಲಾಗಿದೆ. ಇನ್ನುಳಿದ 10 ವಾರ್ಡ್ಗಳಲ್ಲಿ ಸಹಿತ ಶೀಘ್ರದಲ್ಲಿಯೆ ಕುಡಿಯುವ ನೀರು ಬಿಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.