ಮಾರುಕಟ್ಟೆ ಅವ್ಯವಸ್ಥೆಗೆ ಸಚಿವ ದಿನೇಶ್ ಕಿಡಿ
ಹುಬ್ಬಳ್ಳಿ: ನಗರದ ಜನತಾ ಬಜಾರ್ ಹಾಗೂ ದುರ್ಗದಬೈಲ್ ಮಾರುಕಟ್ಟೆಗಳಿಗೆ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಸದಿಂದ ತುಂಬಿದ ಕಂಟೇನರ್, ಬೆಳಗಾದರೂ ಮಾರುಕಟ್ಟೆಗಳ ಕಸ ವಿಲೇವಾರಿ ಮಾಡದಿರುವುದನ್ನು ಗಮನಿಸಿದ ದಿನೇಶ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದುರ್ಗದಬೈಲ್ ಮಾರುಕಟ್ಟೆಯಲ್ಲಿ ಸ್ವಚ್ಛತೆ ಹಾಗೂ ಸೌಲಭ್ಯ ವಂಚಿತ ಪೌರ ಕಾರ್ಮಿಕರ ಅಹವಾಲನ್ನು ಆಲಿಸಿದರು. ಮಾರುಕಟ್ಟೆ ವ್ಯವಸ್ಥೆ ಹದಗೆಟ್ಟಿದೆ. ಪೌರ ಕಾರ್ಮಿಕರಿಗೆ ಸಮವಸ್ತ್ರಗಳಿಲ್ಲ. ಸರ್ಕಾರದ ಸೌಲಭ್ಯಗಳೂ ದೊರೆಯುತ್ತಿಲ್ಲ. ಸೌಲಭ್ಯ್ನ ಒದಗಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೂರು ವರ್ಷಕ್ಕೊಮ್ಮೆ ಸಮವಸ್ತ್ರ ಕೊಡುತ್ತಾರೆ. ಮತ್ತೆ ಕೇಳಿದರೆ, ಹಣ ನೀಡುವಂತೆ ಒತ್ತಾಯಿಸುತ್ತಾರೆ. ಪಿಎಫ್, ಇಎಸ್ಐ ಬಗ್ಗೆ ಮಾಹಿತಿಯೇ ಇಲ್ಲ. ಪ್ರತಿ ತಿಂಗಳು ನೀಡುವ # 5,576 ಸಂಬಳದಲ್ಲಿ ಗುತ್ತಿಗೆದಾರರು # 600ನ್ನು ಮುರಿದುಕೊಳ್ಳುತ್ತಾರೆ. ಕೇಳಿದರೆ, ಕೆಲಸಕ್ಕೆ ಬಾರದಂತೆ ಬೆದರಿಕೆ ಹಾಕುತ್ತಾರೆಂದು ಪೌರ ಕಾರ್ಮಿಕರು ಅಳಲು ತೋಡಿಕೊಂಡರು. ಈ ಕುರಿತಾಗಿ ವಾರದೊಳಗೆ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸಚಿವರು ತಾಕೀತು ಮಾಡಿದರು. ದುರ್ಗದಬೈಲ್ ವೃತ್ತದಲ್ಲಿ ಇರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ, ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಕಲ್ಪಿಸುವಂತೆಯೂ ಸಚಿವರು ಸೂಚಿಸಿದರು. ಇದಕ್ಕೂ ಮೊದಲು ಜನತಾ ಬಜಾರ್ನ ಸ್ವಚ್ಛತೆ ಪರಿಶೀಲಿಸಿದರು. ಶಾಸಕ ಪ್ರಸಾದ್ ಅಬ್ಬಯ್ಯ, ಮೇಯರ್ ಶಿವು ಹಿರೇಮಠ, ಆಯುಕ್ತ ರಮಣದೀಪ ಚೌಧರಿ, ಸದಾನಂದ ಡಂಗನವರ, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

