ಛಾಯಾಚಿತ್ರಗಳು ವಸ್ತುಗಳ ನೈಜತೆ ಕಟ್ಟಿಕೊಡುತ್ತವೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 13
ಛಾಯಾಚಿತ್ರಗಳು ಪ್ರಕೃತಿ, ವನ್ಯಪ್ರಾಣಿಗಳು ಸೇರಿದಂತೆ ಇತರ ವಸ್ತುಗಳ ನೈಜತೆಯನ್ನು ಆಕರ್ಷಕವಾಗಿ ಕಟ್ಟಿಕೊಡುತ್ತವೆ. ಛಾಯಾಚಿತ್ರಗಳು ಪ್ರತಿಯೊಬ್ಬರಿಗೆ ಅಗತ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬ ತಿಳಿಸಿದ್ದಾರೆ.
ಶುಕ್ರವಾರ ನಗರದ ಕಪ್ಪಗಲ್ ರಸ್ತೆಯ ಲಯನ್ಸ್ ಕ್ಲಬ್ ಭವನದಲ್ಲಿ ಗದಗ ಜಿಲ್ಲೆಯ ಮುಂಡರಗಿಯ ಫಿಶ್ ಐ ಫೋಟೋಗ್ರಫಿ ಕ್ಲಬ್ ಏರ್ಪಡಿಸಿದ್ದ ಪ್ರಥಮ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಚಿತ್ರ ಪ್ರದರ್ಶನ ಕೇವಲ ಸ್ಪರ್ಧೆಗಾಗಿ ಅಲ್ಲ. ಅದರಿಂದ ಶಿಕ್ಷಣ ಪ್ರಕೃತಿ ಮೇಲೆ ಮೂಡಿಸುವ ಪ್ರಮುಖ ಮಾಧ್ಯಮ. ಇಂತಹ ಪ್ರದರ್ಶನಗಳು ಬಳ್ಳಾರಿ ಸಹಿತ ರಾಜ್ಯದ ಅನೇಕ ಕಡೆಗಳಲ್ಲಿ ನಡೆಯುವಂತಾಗಬೇಕು ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಎಸ್. ಪನ್ನರಾಜ್ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಛಾಯಾಚಿತ್ರ ಕಲೆಯಿಂದ ಪ್ರಕೃತಿ ಪ್ರೇಮ ಮೂಡಿಸುತ್ತದೆ. ಕಾಡುಗಳಲ್ಲಿ ಸೇರಿದಂತೆ ದೂರದ ಪ್ರದೇಶಗಳಲ್ಲಿ ಇರುವ ಅಪರೂಪದ ವನ್ಯಜೀವಿ, ಪಕ್ಷಿ, ಸರಿಸೃಪಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಜನರಿಗೆ ಕಟ್ಟಿ ಕೊಡಲಿದ್ದಾರೆ. ಇಂತಹ ಛಾಯಾಚಿತ್ರಗಳನ್ನು ಬಳ್ಳಾರಿ ನಗರದಲ್ಲಿ ಪ್ರಥಮ ಬಾರಿಗೆ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಒಪನ್ ಕಲರ್, ಕಪ್ಪು ಬಿಳುಪು, ನೇಚರ್, ಫೋಟೋ ಟ್ರಾವೆಲ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ವಿನಯ ಸಿಕ್ವೇರಾ, ದಾಮೋದರ ಉಡುಪಿ, ಪ್ರಸನ್ನ ಹೆಬ್ಬಾರ ಅವರಿಗೆ ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಆಂಧ್ರಪ್ರದೇಶದ ಖ್ಯಾತ ಛಾಯಾಗ್ರಾಹಕ ಟಿ.ಎಸ್. ರೆಡ್ಡಿ, ಬೆಂಗಳೂರಿನ ಶಿವು ಕೆ., ಎ.ಜಿ. ಗಂಗಾಧರ, ಕುಂದಾಪುರದ ಸಂತೋಷ ಕುಂದೇಶ್ವರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಬಳ್ಳಾರಿಯ ಖ್ಯಾತ ಛಾಯಾಗ್ರಾಹಕ ದಿ. ಬೂದೂರು ಕೃಷ್ಣಮೂರ್ತಿ ಅವರ ಪತ್ನಿ ಶಾರದಾ ಕೃಷ್ಣಮೂರ್ರ್ತಿ ಬಹುಮಾನಗಳ ಪ್ರಾಯೋಜಕರಾಗಿದ್ದರು.
ಡಾ. ಅರವಿಂದ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಿಶ್ಐ ಫೋಟೋಗ್ರಫಿ ಕ್ಲಬ್ ಅಧ್ಯಕ್ಷ ನೆಗಳೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲೀಮ ಬಳಬಟ್ಟಿ, ಹೇಮಚಂದ್ರ ಜೈನ್, ಮಲ್ಲಿಕಾರ್ಜುನ ದಾನನ್ನವರ, ಕೆ. ನಾರಾಯಣರೆಡ್ಡಿ ಇದ್ದರು. ಕ್ಲಬ್ ನಿರ್ದೇಶಕ ಸಿದ್ದಲಿಂಗ ಸ್ವಾಮಿ ಸ್ವಾಗತಿಸಿದರು. ಸಿದ್ದರಾಮ ಕಲ್ಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

