ಪ್ರೀತಿಸಿ ಕೈಕೊಟ್ಟ ಯುವಕ: ಪ್ರತಿಭಟನೆ
ಕುರುಗೋಡು: ತಾಲೂಕಿನ ಮುದ್ದಟನೂರು ಗ್ರಾಮದಲ್ಲಿ ಮದುವೆಯಾಗುವುದಾಗಿ ನಂಬಿಸಿ, ಯುವತಿ ಗರ್ಭಣಿಯಾಗುತ್ತಿದ್ದಂತೆ ಕೈಕೊಟ್ಟು ಪರಾರಿಯಾದ ಯುವಕನ ಮನೆ ಎದುರು ಯುವತಿಯ ಕುಟುಂಬದ ಸದಸ್ಯರು, ಕನ್ನಡ ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಧರಣಿ ಆರಂಭಿಸಿದರು.
ಕನ್ನಡ ಸೇನೆ ಹೈದ್ರಾಬಾದ್ ಕರ್ನಾಟಕ ಸಂಘದ ಉಪಾಧ್ಯಕ್ಷ ಎರ್ರಿಸ್ವಾಮಿ ಮಾತನಾಡಿ, ಕಳೆದ ಮೂರು ತಿಂಗಳಿಂದ 19 ವರ್ಷದ ಯುವತಿಯನ್ನು ಅದೇ ಗ್ರಾಮದ 21 ವರ್ಷದ ಸಂತೋಷ್ ಎಂಬ ಯುವಕ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ಯುವತಿ ಗರ್ಭವತಿಯಾಗುತ್ತಿದ್ದಂತೆ ಯುವಕ ಪರಾರಿಯಾಗಿದ್ದಾನೆ. ಯುವಕನನ್ನು ಕರೆತಂದು ಮದುವೆ ಮಾಡುವವ ವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮಾತನಾಡಿ, ಈಗಾಗಲೇ ವಿಮ್ಸ್ನಲ್ಲಿ ಡಿಎನ್ಎ ಮಾಹಿತಿ ಪಡೆದಿದ್ದೇವೆ. ಹುಡುಗನ ಹುಡುಕಾಟದಲ್ಲಿ ತೊಡಗಿದ್ದೇವೆ. ಯಾವುದೇ ಕಾರಣಕ್ಕೂ ಹುಡುಗಿಗೆ ಅನ್ಯಾಯವಾಗದಂತೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಕನ್ನಡ ಸೇನೆಯ ಪ್ರಮುಖ ಸುಧಾಕರ್, ಗಾದೆಪ್ಪ, ಬಸವರಾಜ್, ನಟರಾಜ್, ರಾಘವೇಂದ್ರ, ಮಹಿಳಾ ಘಟಕದ ಲಕ್ಷ್ಮಿದೇವಿ, ಈರಮ್ಮ, ಅನಿತಾ, ಮಹಾಂಕಾಳಿ, ಗ್ರಾಮಸ್ಥರಾದ ಎನ್. ಗಾದಿಲಿಂಗಪ್ಪ, ಅಂಜಿನಪ್ಪ, ಕೆ. ಚಿಂತಾಮಣಿ, ಶಿವರಾಜ್ ಇದ್ದರು.
ಹುಡುಗಿಯ ತಂದೆ ಮಾತನಾಡಿ, ನನ್ನ ಮಗಳಿಗೆ ಅನ್ಯಾಯವಾಗಿದೆ, ಮೂರು ತಿಂಗಳಿಂದ ಹುಡುಗ ನಮ್ಮ ಮನೆ ಸುತ್ತ ಸುಳಿದಾಡುತ್ತಿದ್ದ. ನಮ್ಮ ಕುಲದವರು ಎಂದು ನಂಬಿದ್ದೆ. ಆದರೆ ಹೀಗೆ ಮೋಸ ಮಾಡುತ್ತಾನೆಂದು ಗೊತ್ತಿರಲಿಲ್ಲ, ಹುಡುಗ ಪ್ರೀತಿಸಿ ಕೈ ಬಿಟ್ಟಿದ್ದಾನೆ. ಮದುವೆ ಆಗುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

