ಬಳ್ಳಾರಿ

ಜೆಸ್ಕಾಂ ನಿರ್ಲಕ್ಷ್ಯ: ನಿರಂತರ ಆರುವ ಜ್ಯೋತಿ

Published On :

ಹೂವಿನಹಡಗಲಿ: ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಹೂವಿನಹಡಗಲಿ ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಿರಂತರವಾಗಿ ಕರೆಂಟ್ ಕೈ ಕೊಟ್ಟರೂ ಯಾರು ಹೇಳೋರಿಲ್ಲ, ಕೇಳೋರಿಲ್ಲ. ಸಾರ್ವಜನಿಕರು ಜೆಸ್ಕಾಂಗೆ ದೂರವಾಣಿ ಕರೆ ಮಾಡಿ ಕೇಳಿದಾಗ ಸಮರ್ಪಕ ಉತ್ತರ ನೀಡದೆ ಅವರು ಆಡಿದ್ದೇ ಆಟವಾಗಿದೆ. ವಿದ್ಯುತ್ ದುರಸ್ತಿ ಕಾರ್ಯ ನಡೆತ್ತಿದೆ ಎಂದು ಪತ್ರಿಕೆಯರಿಗೆ ಕನಿಷ್ಠ ಮಾಹಿತಿ ನೀಡದ ಅಧಿಕಾರಿಗಳು, ವಿದ್ಯುತ್ ಯಾವಾಗ ನೀಡುತ್ತೀರಿ ಎಂದು ಕೇಳಿದರೆ ಕೆಲಸ ಮುಗಿಯುವವರೆಗೂ ಕರೆಂಟ್ ನೀಡಲು ಸಾಧ್ಯವಿಲ್ಲ. ಕೆಲಸ ಎಷ್ಟೊತ್ತಿಗೆ ಮುಗಿಯುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇದರಿಂದಾಗಿ ಜನತೆ ರೋಸಿ ಹೋಗಿದ್ದಾರೆ. ವಿದ್ಯುತ್ ಕೈ ಕೊಟ್ಟಾಗ ಮೇನ್‌ಲೈನ್ ಹೋಗಿದೆ, ಯಾವಾಗ ಬರುತ್ತೆ ಅಂತ ನಮಗೆ ಗೊತ್ತಿಲ್ಲ, ನಿಮಗೆ ಹೇಗೆ ಹೇಳಬೇಕೆಂಬ ಅಧಿಕಾರಿಗಳ ಸಿದ್ಧ ಉತ್ತರ ಯಾವಾಗಲೂ ಇದ್ದೆ ಇರುತ್ತದೆ. ಇನ್ನು ನಿತ್ಯ 3-4 ಬಾರಿ ವಿದ್ಯುತ್ ಇಲ್ಲದಿದ್ದಾಗ ಮಾಧ್ಯಮದವರು ವಿದ್ಯುತ್ ಬಗ್ಗೆ ಮಾಹಿತಿ ಕೇಳಿದಾಗ ಸಮರ್ಪಕ ಉತ್ತರ ನೀಡದೆ ದುರಸ್ತಿ ಕಾರ್ಯಕ್ಕಾಗಿ 2-3 ತಾಸು ವಿದ್ಯುತ್ ತೆಗೆಯಲು ನಿಮಗೆ ಮಾಹಿತಿ ಕೊಡಬೇಕಾಗಿಲ್ಲವೆಂದು ಹೇಳುತ್ತಾರೆ. ಪಟ್ಟಣದಲ್ಲಿ ನಿತ್ಯ ಒಂದಲ್ಲ ಒಂದು ದುರಸ್ತಿ ಕಾರ್ಯ ನಡೆಯುತ್ತಿವೆ. ಯಾರಿಗೂ ಮಾಹಿತಿ ನೀಡದೆ ತಮಗೆ ತಿಳಿದಾಗ ಜೆಸ್ಕಾಂ ಅಧಿಕಾರಿಗಳು ಕರೆಂಟ್ ತೆಗೆಯುವುದು ಯಾವ ನ್ಯಾಯ? ಇವರೇನು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆಯೆ ಎಂಬುದು ಸಾರ್ವಜನಿಕರ ಪ್ರಶ್ನೆ. ಇದಕ್ಕೆ ಜೆಸ್ಕಾಂನವರೆ ಸಮರ್ಪಕ ಉತ್ತರ ನೀಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.