ಆರ್ಥಿಕ ಸಬಲೀಕರಣ: ಯುವಕರಿಗೆ ಪಾಟೀಲ್ ಕರೆ
ಕೊಪ್ಪಳ: ಯುವಕರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರಿಗೆ ಕಾನೂನಿನ ಅರಿವು, ಸರ್ಕಾರಿ ಯೋಜನಗಳ ಸಮಗ್ರ ಮಾಹಿತಿ ಅಗತ್ಯ ಎಂದು ಕೊಪ್ಪಳ ಯುವ ಸಬಲೀಕರಣ ಹಾಗೂ ಸಹಾಯಕ ಕ್ರೀಡಾಧಿಕಾರಿ ಎನ್.ಎಸ್. ಪಾಟೀಲ ಹೇಳಿದರು.
ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಮ್ಮೇಳನ ಹಾಗೂ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯವಜನ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಸದುಪಯೋಗವಾಗಲು ಯುವಕರ ಸಹಕಾರ ಅವಶ್ಯವಿದೆ. ಅರಣ್ಯ ಸಂರಕ್ಷಣೆ, ಸ್ಮಾರಕಗಳ ರಕ್ಷಣೆ, ಜವಳಿ ಮತ್ತು ಗುಡಿ ಕೈಗಾರಿಕೆಗಳನ್ನು ಜೀವಂತವಾಗಿಡಲು ಯುವಕರು ಶ್ರಮಿಸಬೇಕು. ಇಲಾಖೆಯೊಂದಿಗೆ ಯುವಜನತೆ ಕೈ ಜೋಡಿಸಿದಾಗ ಮಾತ್ರ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯವಾಗುತ್ತವೆ. ಇಂದಿನ ಯುವಕರು ದುಶ್ಚಟಗಳಿಂದ ದೂರ ಉಳಿಯಬೇಕು ಎಂದು ಪಾಟೀಲ್ ಹೇಳಿದರು.
ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಗಾಲ ಮಾತನಾಡಿ, ಯುವ ಪೀಳಿಗೆ ದೈಹಿಕ ಮತ್ತು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿವೆ. ಯುವಕರು ಯೋಗ, ವ್ಯಾಯಾಮ ಮತ್ತು ಅಧ್ಯಾತ್ಮದಂತ ವಿಷಯಗಳಲ್ಲಿ ತೊಡಗಿಕೊಂಡು, ತಮ್ಮ ಉದ್ಧಾರವನ್ನು ತಾವು ಮಾಡಿಕೊಂಡರೆ ದೇಶದ ಉದ್ಧಾರವಾಗುತ್ತದೆ ಎಂದರು.
ಪಪೂ ಕಾಲೇಜಿನ ಉಪನ್ಯಾಸಕಿ ಸುಮತಿ ಹಿರೇಮಠ ಉಪನ್ಯಾಸ ನೀಡಿ, ಇಂದು ಯುವ ಸಬಲೀಕರಣದ ಜೊತೆಗೆ ಮಹಿಳಾ ಸಬಲೀಕರಣ ಮತ್ತು ಮಹಿಳೆಗೆ ಮುಕ್ತವಾದ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡುವುದು ಯುವಕರ ಮುಂದಿದೆ ಎಂದರು.
ಹಿರಿಯರಾದ ಶಿವಪುತ್ರಪ್ಪ ತಳವಾರ, ಬಡಕಪ್ಪ ಮಾಸ್ತರ, ಸಿದ್ದನಗೌಡ ಹಿರೇಗೌಡ, ಮುಖ್ಯೋಪಾಧ್ಯಾಯ ವಾಸುದೇವ ಕುಲಕರ್ಣಿ, ಎಚ್.ಎಚ್. ಜಂತ್ಲಿ, ಪತ್ರಕರ್ತ ಬಸವರಾಜ ಗುಡ್ಲಾನೂರು, ಗೀಗೀ ಪದಗಳ ಹಾಡುಗಾರ ವೀರಣ್ಣ ಅಡವಿ ಸೋಂಪುರ, ಗೌಸುಸಾಬ್ ಇದ್ದರು.
ಅಕ್ಷತಾ, ಸಂಗಡಿಗರು ಪ್ರಾರ್ಥಿಸಿದರು. ತಾಯಮ್ಮದೇವಿ ಭಜನಾ ಯುವಕ ಮಂಡಳಿ ಅಧ್ಯಕ್ಷ ಜಗದಯ್ಯ ಸಾಲಿಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

