ಪಠ್ಯಪುಸ್ತಕ ಅಕ್ರಮ ಮಾರಾಟ: ಕ್ರಮಕ್ಕೆ ಒತ್ತಾಯ
ಬಳ್ಳಾರಿ: ಸರ್ಕಾರದ ಆದೇಶ ಪಾಲನೆ ಮಾಡದೆ, ಅಕ್ರಮವಾಗಿ ಪಠ್ಯ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಪುಸ್ತಕ ಅಂಗಡಿ ಮಾಲೀಕರ ಸಂಘ ಡಿಸಿಪಿಐ ವೀರಣ್ಣ ಜತ್ತಿ ಅವರಿಗೆ ಮನವಿ ಸಲ್ಲಿಸಿತು. ಖಾಸಗಿ ಶಾಲೆಗಳಲ್ಲಿ ಪಠ್ಯ ಪುಸ್ತಕಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ 2013 ಜುಲೈ 15ರಂದು ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಪುಸ್ತಕ ಮಾರಾಟ ಮಾಡುವ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಈವರೆಗೂ ಯಾವುದೇ ಶಾಲೆಗಳ ವಿರುದ್ಧ ಸೂಕ್ತ ಕ್ರಮಗಳೆ ನಡೆದಿಲ್ಲ. ಇದರಿಂದ ಸರ್ಕಾರದ ಆದೇಶವನ್ನೂ ನಿರ್ಲಕ್ಷಿಸುತ್ತಿರುವ ಖಾಸಗಿ ಶಾಲೆಗಳು ಎಗ್ಗಿಲ್ಲದೆ ತಮ್ಮ ಪುಸ್ತಕ ಅಕ್ರಮ ಮಾರಾಟವನ್ನು ಮುಂದುವರೆಸಿವೆ ಎಂದು ಸಂಘದ ಅಧ್ಯಕ್ಷ ಸಿದ್ದರಾಮನಗೌಡ ಪಾಟೀಲ್ ಆರೋಪಿಸಿದ್ದಾರೆ. ಪುಸ್ತಕದ ಮೇಲೆ ದೊರೆಯುವ ಕೇವಲ ಕಮೀಷನ್ ಆಸೆಗೆ ಖಾಸಗಿ ಶಾಲೆಗಳ ಮಾಲೀಕರು ಬೇರೆ ಬೇರೆ ಕಂಪನಿಗಳಿಂದ ಮುದ್ರಣಗೊಂಡ ಪುಸ್ತಕಗಳ ಮಾರಾಟ ದಂಧೆಗೆ ಇಳಿಯುತ್ತಿದ್ದು, ಮಕ್ಕಳ ಪಾಲಕರಿಗೂ ಡೀಲರ್ಗಳ ಬಳಿಯೆ ಪುಸ್ತಕ ಖರೀದಿಸುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಪುಸ್ತಕ ಮಾರಾಟವನ್ನೆ ನಂಬಿರುವ ವ್ಯಾಪಾರಿಗಳಿಗೆ ತೊಂದರೆಯಾಗಲಿದ್ದು, ಶಿಕ್ಷಣಾಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕಿಳಿಯಬೇಕಾಗಲಿದೆ ಎಂದು ಎಚ್ಚರಿಸಿದರು. ನಗರದ ವಿವಿಧ ಪುಸ್ತಕ ಅಂಗಡಿಗಳ ಮಾಲೀಕರು, ವ್ಯಾಪಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

