ಬಳ್ಳಾರಿ

ಸ್ತ್ರೀ ಭದ್ರತೆಗೆ ವಿಶೇಷ ಒತ್ತು ನೀಡಿ

Published On :

ಹೊಸಪೇಟೆ: ದೇಶದಲ್ಲಿ ಮಹಿಳೆಯರ ಭದ್ರತೆಗೆ ವಿಶೇಷ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಸ್ಥಳೀಯ ವಿಕಲಚೇತನರ ಸಂಘದ ಶಮೀಮ್ ಬಾನು ಹೇಳಿದರು.
ನಗರದಲ್ಲಿ ತಾಲೂಕು ಗ್ರಾಮೀಣ ವಿಕಲಚೇತನರ ಸಂಘ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದ್ದರೂ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರಗಳು, ಲೈಂಗಿಕ ಕಿರುಕುಳ, ಶೋಷಣೆ, ದಬ್ಬಾಳಿಕೆ ಮತ್ತು ವರದಕ್ಷಿಣೆ ಕಿರುಕುಳ ಸೇರಿದಂತೆ ಇತರೆ ಅಮಾನವೀಯ ಘಟನೆಗಳು ಮಹಿಳೆಯರ ಮೇಲೆ ನಡೆಯುತ್ತಿವೆ. ದೇಶದ ರಾಜಧಾನಿಯಲ್ಲೆ ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿರುವುದನ್ನು ನೋಡಿದರೆ ಇನ್ನು ದೇಶದ ಇತರೆ ಪ್ರದೇಶದಲ್ಲಿ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಭದ್ರತೆ ಇದೆ ಎಂದು ಅರ್ಥವಾಗುತ್ತದೆ. ಆದ್ದರಿಂದ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಭದ್ರತೆಯ ಅವಶ್ಯಕತೆ ಇದೆ ಎಂದು ಹೇಳಿದರು.
ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷ್ಯ ಕವಿತಾ ಈಶ್ವರ್ ಸಿಂಗ್, ಸ್ಥಳೀಯ ವಿಕಲಚೇತನ ಮಹಿಳೆ ಶಮೀನಾ ಕೌಸರ್, ವಿಕಲಚೇತನ ಮಹಿಳೆಯರಾದ ಖಾಜಬನ್ನಿ, ಚಾಂದ್ಬಿ, ಲಕ್ಷ್ಮೀ, ಶಿವಗಂಗಮ್ಮ, ಗಾಯಿತ್ರಿ, ಸುಮಾ, ರೇಣುಕಾ, ಶರಣಮ್ಮ, ಅಲ್ಲಾಬು, ಬಷೀರಾ, ರೇಷ್ಮಾ, ಫೈರೋಜಾ, ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ಎನ್. ವೆಂಕಟೇಶ್, ಜಿ. ಅಂಜಿನಿ, ರಾಜಶೇಖರ್, ಹುಲುಗಪ್ಪ, ರಾಜಸಾಬ್, ರಫಿಕ್, ಪಾಂಡುನಾಯಕ್, ಮಹೇಶ್, ನಾಗರಾಜ್, ಅರುಣ್ಕುಮಾರ್, ದಾದಾಪೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.