ಬಳ್ಳಾರಿ

ಇಂದು ಒಪ್ಪತ್ತೇಶ್ವರ ಸ್ವಾಮಿ ರಥೋತ್ಸವ

Published On :

ಹೊಸಪೇಟೆ: ಗುರು ಒಪ್ಪತ್ತೇಶ್ವರ ಮಹಾಸ್ವಾಮಿ ರಥೋತ್ಸವ ತಾಲೂಕಿನ ಜಿ. ನಾಗಲಾಪುರದಲ್ಲಿ ಮಾ. 11ರ ಸಂಜೆ 5ಕ್ಕೆ ನಡೆಯಲಿದೆ. 6.30ಕ್ಕೆ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವನ್ನು ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ವಹಿಸುವರು. ಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀ, ಜಿ. ನಾಗಲಾಪುರದ ಒಪ್ಪತ್ತೇಶ್ವರ ಮಠದ ಮರಿಮಹಾಂತ ಶ್ರೀ ನೇತೃತ್ವ ವಹಿಸುವರು. ಮಾಡಾಳ ಶಿವಬಸವ ಗುರುಕುಮಾರಶ್ರಮದ ತೋಂಟದಾರ್ಯ ಶ್ರೀ ಅಧ್ಯಕ್ಷತೆ ವಹಿಸುವರು. ದರೂರಿನ ಸಂಗನಬಸವೇಶ್ವರ ಮಠದ ಕೊಟ್ಟೂರು ದೇಶಿಕರು, ಬೆಟ್ಟದೂರಿನ ಶಿವಾನುಭಾವಿ ಮಹಾದೇವ ದೇವರು ಭಾಗವಹಿಸುವರು. ಶಾಸಕರಾದ ಎಸ್. ಭೀಮಾನಾಯ್ಕ, ಅನಿಲ್ ಲಾಡ್, ಎಂ.ಪಿ. ರವೀಂದ್ರ, ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ, ಶಿರಾಜ್ ಶೇಖ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಸಂಡೂರಿನ ರಾಜ್ಯ ಪಂಚಮಸಾಲಿ ಸಂಘದ ಉಪಾಧ್ಯಕ್ಷ ಟಿ. ನಾಗನಗೌಡ, ಉದ್ಯಮಿ ಗೊಗ್ಗ ಚನ್ನಬಸವರಾಜ, ವಸ್ತ್ರದ ವೀರಭದ್ರಯ್ಯ, ರೂಪಾ ಲಾಡ್, ಕುರಿ ಶಿವಮೂರ್ತಿ, ವಸ್ತ್ರದ ಶಿವಶಂಕರಯ್ಯ, ಡಾ. ಪರಸಪ್ಪ, ಎಲ್. ನಾಗರಾಜ್, ಜಿಪಂ ಸದಸ್ಯೆ ತಿಪ್ಪೀಬಾಯಿ ಠಾಕ್ರಾನಾಯ್ಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಆರ್. ಬಸವರಾಜಪ್ಪ, ತಾಪಂ ಸದಸ್ಯ ಎಚ್. ಲಕ್ಷ್ಮಣ, ಬಿ. ವಿರೂಪಜ್ಜ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ರುಕ್ಮಿಣಿಬಾಯಿ, ಎಚ್. ಭೀಮಪ್ಪ, ಜೆಸ್ಕಾಂನ ಕೆ. ಸತೀಶ್, ಎಚ್. ನಾಗರಾಜ್, ಎಂ. ಸಿದ್ದಲಿಂಗಸ್ವಾಮಿ, ಕೆ.ಎಂ. ನವೀನ್‌ಕುಮಾರ್ ಅತಿಥಿಗಳಾಗಿ ಭಾಗವಹಿಸುವರು. ವಿಜಯನಗರ ಕಾಲೇಜು ಉಪನ್ಯಾಸಕ ಡಾ. ಮೃತ್ಯುಂಜಯ ರುಮಾಲೆ, ಎನ್.ಎಂ. ರವಿಕುಮಾರ್ ಉಪನ್ಯಾಸ ನೀಡುವರು. ನಂತರ ಬಿ. ವಿಜಯಕುಮಾರ್, ಬಿ.ಎಂ. ವಿರೂಪಾಕ್ಷಯ್ಯ, ಪ್ರಕಾಶ ಶಾಸ್ತ್ರಿ, ಎಂ.ಬಿ. ನರಸಪ್ಪಾಚಾರ್, ರೋಜಾದೇವಿ, ಎಸ್. ಸುಬ್ಬಯ್ಯ, ಡಣಾಯಕನಕೆರೆಯ ಡಿ.ಎಂ. ತೋಟಯ್ಯಸ್ವಾಮಿ, ಬಿ. ಮಲ್ಲಿಕಾರ್ಜುನ, ತಾರಳ್ಳಿ ರುದ್ರಯ್ಯಸ್ವಾಮಿ, ಕೆ. ಸಿದ್ದಲಿಂಗಪ್ಪ ಸಂಗೀತ ಪ್ರಸ್ತುತಪಡಿಸುವರು.
ಸಂತ್ರಸ್ತರಿಗೆ ಸೂರು ಒದಗಿಸಲು ಆಗ್ರಹ
ಬಳ್ಳಾರಿ: ಜಿಲ್ಲೆಯ ಬಳ್ಳಾರಿ ತಾಲೂಕು ಸೇರಿದಂತೆ ವಿವಿಧೆಡೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಸೂರು ಕಳೆದುಕೊಂಡವರಿಗೆ ಅಗತ್ಯ ಸೌಲಭ್ಯ ಹಾಗೂ ನಷ್ಟಕ್ಕೊಳಗಾದವರಿಗೆ ಅಗತ್ಯ ಪರಿಹಾರ ನೀಡಬೇಕು ಎಂದು ಎಸ್‌ಯುಸಿಐ ಸಂಘಟನೆ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ಸಂಘಟನೆಯ ಡಾ. ಪ್ರಮೋದ್ ಮಾತನಾಡಿ, ಬುಧವಾರ ಮತ್ತು ಶುಕ್ರವಾರ ಸುರಿದ ಭೀಕರ ಆಲಿಕಲ್ಲು ಮಳೆಗೆ ಮುಂಡ್ರಿಗಿಯಲ್ಲಿ ಹಲವಾರು ಮನೆಗಳು ಬಿದ್ದು, ಮನೆಯೊಳಗೆ ನೀರು ನುಗ್ಗಿ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಲಕ್ಷಾಂತರ ರು. ಬೆಳೆ ನಷ್ಟವಾಗಿದೆ. ನೂರಾರು ಜಾನುವಾರುಗಳು ಮೃತಪಟ್ಟಿವೆ. ಗಿಡ, ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಜನರು ಕತ್ತಲಲ್ಲಿ ವಾಸಿಸುವಂತಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ಕೂಡಲೆ ಹೆಚ್ಚುವರಿ ಗಂಜಿ ಕೇಂದ್ರಗಳನ್ನು ತೆರೆಯಬೇಕು. ನಿರಂತರ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ನೆಲೆ ಕಲ್ಪಿಸಬೇಕು. ಮನೆ, ಬೆಳೆ, ಜಾನುವಾರು ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಚರಂಡಿ ಕಾಮಗಾರಿ ಮುಗಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಪಾಲಿಕೆ ಕೂಡಲೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎರ್ರಿಸ್ವಾಮಿ, ವೀರೇಶ್, ನಾಗರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.