ಜೆಡಿಎಸ್ಗೆ ವೈ. ಮಲ್ಲಿಕಾರ್ಜುನ ಪುನರಾಯ್ಕೆ
ಹಗರಿಬೊಮ್ಮನಹಳ್ಳಿ: ಜಾತ್ಯತೀತ ಜನತಾದಳದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ವೈ. ಮಲ್ಲಿಕಾರ್ಜುನ ಅವರು ಪುನರ್ ನೇಮಕಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸೂಚನೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಆದೇಶದ ಮೇರೆಗೆ ಮಲ್ಲಿಕಾರ್ಜುನ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವಿ. ಶ್ರೀನಿವಾಸ್ ಕುಡಿತಿನಿ ತಿಳಿಸಿದ್ದಾರೆ ಎಂದು ವೈ. ಮಲ್ಲಿಕಾರ್ಜುನ ಹೇಳಿದ್ದಾರೆ.
ಪಕ್ಷ ವಹಿಸಿದ ಗುರುತರ ಜವಾಬ್ದಾರಿಯನ್ನು ತೆಗೆದುಕೊಂಡು ಎಲ್ಲ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ರಚನಾತ್ಮಕ ಹಾಗೂ ಪರಿಣಾಕಾರಿಯಾಗಿ ಸಂಘಟಿಸುತ್ತೇನೆಂದು ಅವರು ತಿಳಿಸಿದ್ದಾರೆ.
ಶಾಸಕ ಎಸ್. ಭೀಮಾನಾಯ್ಕ, ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಬನ್ನಿಗೋಳ ವೆಂಕಣ್ಣ, ಪಕ್ಷದ ಹಿರಿಯ ಮುಖಂಡ ಹೂಗಾರ ಮಲ್ಲಣ್ಣ, ಎಚ್.ಎಂ. ಚೋಳರಾಜ್, ಹಂಚಿನಮನಿ ಹನುಮಂತಪ್ಪ, ನಾಣಿಕೇರಿ ಎಂಜೇಪ್ಪ, ವರದಾಪುರ ಕುಮಾರ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹುಡೇದ್ ಗುರುಬಸವರಾಜ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಮಹಿಳಾ ಘಟಕದ ಅಧ್ಯಕ್ಷೆ ಕಲ್ಗುಡಿ ಕಮಲಮ್ಮ, ಎಸ್ಟಿ ಘಟಕದ ಅಧ್ಯಕ್ಷ ಸಣ್ಣಪವಾಡಿ ಹನುಮಂತಪ್ಪ ನೂತನ ಅಧ್ಯಕ್ಷರ ನೇಮಕಾತಿ ಸ್ವಾಗತಿಸಿ, ಅಭಿನಂದಿಸಿದ್ದಾರೆ.
ಗಣಿತ ಪರೀಕ್ಷೆಯಲ್ಲಿ ಅಭಿಷೇಕ್ ಪ್ರಥಮ
ಕೊಟ್ಟೂರು: ಸಮೀಪದ ಮಂಗನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಟಿ. ಅಭಿಷೇಕ್ ರಾಜ್ಯಮಟ್ಟದ ಒಲಂಪಿಯಾಡ್ ಗಣಿತ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮನಾಗಿ ಹೊರಹೊಮ್ಮುವ ಮೂಲಕ ಗ್ರಾಮೀಣ ಸಾಮರ್ಥ್ಯ ತೋರಿದ್ದಾನೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಒಲಂಪಿಯಾಡ್ ಗಣಿತ ಪರೀಕ್ಷೆಯಲ್ಲಿ ಈತ ಜಿಲ್ಲೆಯ ಟಾಫರ್ ಆಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಡಿಡಿಪಿಐ ವೀರಣ್ಣ ಎಸ್. ಜತ್ತಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

