ಇಂದು ಉಪನ್ಯಾಸ
ಹೊಸಪೇಟೆ: ಹಂಪಿ ಕನ್ನಡ ವಿವಿಯ ಮಹಿಳಾ ಅಧ್ಯಯನ ವಿಭಾಗದ ವಿಶೇಷ ಉಪನ್ಯಾಸ ಮಾಲೆ-1 ಕಾರ್ಯಕ್ರಮದಲ್ಲಿ ಸ್ತ್ರೀವಾದಿ ಚಿಂತನೆಗಳು, ಮಹಿಳಾ ಅಧ್ಯಯನ ಸಮಕಾಲಿನ ಬೆಳವಣಿಗೆಗಳ ಕುರಿತು ಉಪನ್ಯಾಸ ಕಾರ್ಯಕ್ರಮವು ಹಂಪಿ ವಿವಿಯ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಮಾ. 12ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಮಂಗಳೂರಿನ ಸ್ತ್ರೀವಾದಿ ಚಿಂತಕ ಡಾ. ರಾಬರ್ಟ್ ವಿಲಿಯಂ ಡಿಸಿಲ್ವಾ ಉಪನ್ಯಾಸ ನೀಡುವರು. ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿವಿಯ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಹಂಪಿ ಕನ್ನಡ ವಿವಿಯ ಮಹಿಳಾ ವಿಭಾಗದ ಮುಖ್ಯಸ್ಥೆ ಡಾ. ಶೈಲಜ ಹಿರೇಮಠ್ ಸಭೆಯಲ್ಲಿ ಭಾಗವಹಿಸುವರು.
ಇಂದು ಮಹಿಳಾ ದಿನಾಚರಣೆ
ಹೊಸಪೇಟೆ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಗರದ ಸಂಡೂರು ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮಾ. 12ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಹೊಸಪೇಟೆಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಕೆ. ರತ್ನಾಕರರಾವ್ ಅಧ್ಯಕ್ಷತೆ ವಹಿಸುವರು. ನ್ಯಾಯಾಧೀಶರಾದ ಕೆ. ನಾರಾಯಣ ಪ್ರಸಾದ್, ಹತ್ತಿಕಾಳು ಪ್ರಭುಸಿದ್ದಪ್ಪ, ಎಸಿಪಿ ಮಂಜುನಾಥ, ಸಿಡಿಪಿಒ ಮಂಜುನಾಥ ಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ್ ಹಿರೇಮಠ್, ಡಿವೈಎಸ್ಪಿ ಡಿ.ಡಿ. ಮಾಳಿಗಿ, ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಅನ್ವೇಕರ್ ಭಾಗವಹಿಸುವರು. ಕೊಟ್ರೇಶ್ ಹಿರೇಮಠ್, ನ್ಯಾಯವಾದಿ ಭಾಗ್ಯಲಕ್ಷ್ಮೀ ಭರಾಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
ಎನ್ನೆಸ್ಸೆಸ್ ವಿಶೇಷ ಶಿಬಿರ
ಹೊಸಪೇಟೆ: ಥಿಯೋಸಾಫಿಕಲ್ ಸೊಸೈಟಿಯ ಜಿ. ಸುಧಾ ಶಂಕರಗೌಡ ಮೆಮೋರಿಯಲ್ ಥಿಯೋಸಾಫಿಕಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ನಗರದಲ್ಲಿ ನಡೆಯಿತು. ಚಿತ್ತವಾಡ್ಗಿ ನಗರಸಭಾ ಸದಸ್ಯ ಪಿ. ಮಲ್ಲಿಕಾರ್ಜುನ ಶಿಬಿರ ಉದ್ಘಾಟಿಸಿದರು. ಕಾಲೇಜಿನ ಸಂಚಾಲಕ ಸದಾಶಿವ ರೆಡ್ಡಿ ಅಧ್ಯಕ್ಷತೆ ವಹಿಸಿಸಿದ್ದರು. ಎನ್. ರಾಮಕೃಷ್ಣ, ಮುದ್ಲಾಪುರ ನಾಗೇಶರಾವ್, ಥಿಯೋಸಾಫಿಕಲ್ ಪಿಯುಸಿ ಕಾಲೇಜು ಪ್ರಾಚಾರ್ಯ ಪಿ.ಎಂ. ಜಗದೀಶ್, ಎನ್ನೆಸ್ಸೆಸ್ ಅಧಿಕಾರಿ ಎಂ. ಭುವನೇಶ್ವರಿ, ಅಂಜಲಿ ದೇಸಾಯಿ, ಪ್ರಾಚಾರ್ಯ ರಘೂತ್ತಮ ಅರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

