ಶ್ರದ್ಧಾ ಭಕ್ತಿಯ ಒಪ್ಪತ್ತೇಶ್ವರ ಸ್ವಾಮಿ ರಥೋತ್ಸವ
ಹೊಸಪೇಟೆ: ತಾಲೂಕಿನ ಗರಗ ನಾಗಲಾಪುರ ಗ್ರಾಮದ ಮಹಾಶಿವಯೋಗಿ ಒಪ್ಪತ್ತೇಶ್ವರ ಸ್ವಾಮಿ ರಥೋತ್ಸವ ಶ್ರದ್ಧಾ ಭಕ್ತಿಯಿಂದ ಮಂಗಳವಾರ ಸಂಜೆ ಜರುಗಿತು.
ರಥೋತ್ಸವದ ಅಂಗವಾಗಿ ಒಪ್ಪತ್ತೇಶ್ವರ ಸ್ವಾಮಿ ಮಠದಲ್ಲಿ ಸ್ವಾಮಿಗೆ ಬೆಳಗ್ಗೆ ಮಹಾರುದ್ರಾಭಿಷೇಕ, ಷಟ್ಸ್ಥಳ ಧ್ವಜಾರೋಹಣ, ವಿಶೇಷ ಅಲಂಕಾರ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಮಠಕ್ಕೆ ತೆರಳಿ ದೇವರ ದರ್ಶನ ಪಡೆದರು. ಜಿ. ನಾಗಲಾಪುರ, ನಾಗಲಾಪುರ ತಾಂಡಾ, ಬ್ಯಾಲಕುಂದಿ, ಗರಗ, ಗೊಲ್ಲರಹಳ್ಳಿ, ಡಣಾಯಕನಕೆರೆ, ಗುಂಡಾ, ಮರಿಯಮ್ಮನಹಳ್ಳಿ, ಹಾರವನಹಳ್ಳಿ, ಚಿಲಕನಹಟ್ಟಿ, ತಿಮ್ಮಾಲಾಪುರ, ಪೋತಲಕಟ್ಟೆ, ದೇವಲಾಪುರ, ನಂದಿಬಂಡಿ, ಡಣಾಪುರ, ಹನುಮನಹಳ್ಳಿ, ಗಾಳೆಮ್ಮನಗುಡಿ, ವ್ಯಾಸನಕೆರೆ, ವೆಂಕಟಾಪುರ, ಅಯ್ಯನಹಳ್ಳಿ, ಹೊಸಪೇಟೆ ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ಸ್ವಾಮಿಗೆ ಹೂವು, ಹಣ್ಣು, ಕಾಯಿ ಅರ್ಪಿಸಿದರು.
ಒಪ್ಪತ್ತೇಶ್ವಸ್ವಾಮಿ ಮಠವನ್ನು ತಳಿರು ತೋರಣಗಳಿಂದ ಮತ್ತು ವಿವಿಧ ಹೂವಿನ ಹಾರಗಳಿಂದ ಶೃಂಗರಿಸಲಾಗಿತ್ತು. ಸಂಜೆ ಒಪ್ಪತ್ತೇಶ್ವರ ಸ್ವಾಮಿ ಮಠದ ಮರಿಮಹಾಂತ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆ ಹಣ್ಣು, ಹೂವು ತೂರಿ ದೇವರಿಗೆ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಹಾಗೂ ಗ್ರಾಮದ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

