ಸಂಭ್ರಮದ ಐತಿಹಾಸಿಕ ಬಂಡೆರಂಗಪ್ಪ ರಥೋತ್ಸವ
ಹಗರಿಬೊಮ್ಮನಹಳ್ಳಿ: ಬಿಸಿಲೂರಿನ ಆರಾಧ್ಯದೈವ, ಉತ್ತರ ತಂಬ್ರಹಳ್ಳಿ ಬಳಿಯ ಐತಿಹಾಸಿಕ ಶ್ರೀ ಬಂಡೆ ರಂಗಪ್ಪಜ್ಜನ ರಥೋತ್ಸವ ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೇರವೇರಿತು.
ತಾಲೂಕು, ಪಕ್ಕದ ಜಿಲ್ಲೆಗಳಾದ ಕೊಪ್ಪಳ, ಗದಗ, ದಾವಣಗೆರೆ ಹಾಗೂ ಹಾವೇರಿಯಿಂದಲೂ ಭಕ್ತಾದಿಗಳು ಆಗಮಿಸಿದ್ದರು. ತೇರಿನ ಮಿಣಿ ಎಳೆದು, ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತೆ, ಹೂವು ಸಮರ್ಪಿಸಿ, ಸಂಭ್ರಮಿಸಿದರು. ಜನಜಂಗುಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.
ತೇರಿಗೆ ಬಂದಿದ್ದ ಭಕ್ತರು ಬೆಟ್ಟದ ಮೇಲೆ ನೆಲಸಿರುವ ಬಂಡೆ ರಂಗಪ್ಪಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿ, ಬೆಟ್ಟದ ಮೇಲಿರುವ ಐತಿಹಾಸಿಕ ತಂಗಾಳಿ ಗೋಪುರ, ಲಕ್ಷ್ಮೀ ದೇವಸ್ಥಾನ, ನೀರಿನ ಹೊಂಡ ಹಾಗೂ ತುಂಗಭದ್ರಾ ಜಲಾಶಯದ ವಿಹಂಗಮ ದೃಶ್ಯಗಳನ್ನು ಸವಿದರು. ಬೆಟ್ಟದಿಂದ ಇಳಿಯುವಾಗ ಮುಳ್ಳಿನ ಕಂಟಿಯಲ್ಲಿ ಅಡಗಿರುವ ಸುಂದರ ಕೆತ್ತನೆಯ ಐತಿಹಾಸಿಕ ಬಾವಿಯ ಮುಖ್ಯ ದ್ವಾರದ ಬಳಿಕೆ ಹೋಗಿ, ಇಣುಕಿ ನೋಡಿದರು.
ರಥೋತ್ಸವಕ್ಕೂ ಮುನ್ನ ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮಿಗಳು ಭಕ್ತರೊಂದಿಗೆ ತಂಬ್ರಹಳ್ಳಿಯಿಂದ ಪಾದಯಾತ್ರೆಯಲ್ಲಿ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕಡ್ಡಿ ಚನ್ನಬಸಪ್ಪ, ಮಾಜಿ ಪ್ರಧಾನ ಅಕ್ಕಿ ಕೊಟ್ರಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಎಂ.ಪಿ. ಪರಮೇಶ, ಗೌರಜ್ಜನವರ ಮಲ್ಲಿಕಾರ್ಜುನ, ಗಿರಿ, ಮಂಜುನಾಥ ಪಾಟೀಲ್, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಮೋರಗೇರಿ ವಿಶ್ವನಾಥ ಇದ್ದರು. ಸಿಪಿಐ ಮಲ್ಲೇಶ ನಾಯ್ಕ ದೊಡ್ಡಮನಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

