ಉತ್ತಮ ಹವಾಮಾನದಿಂದ ನೆಮ್ಮದಿ ಜೀವನ
ಉತ್ತಮ ಹವಾಮಾನ ಇದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಇಂತಹ ಉತ್ತಮ ಹವಾಮಾನದ ಕುರಿತು ಜಾಗೃತಿ ಮೂಡಿಸಲು 'ಹವಾಮಾನ ದಿನ' ಆಚರಿಸಲಾಗುತ್ತಿದೆ ಎಂಬುದು ಬಹುತೇಕರಿಗೆ ತಿಳಿಯದು. ಉತ್ತಮ ಹವಾಮಾನ ನಿರ್ಮಿಸಿಕೊಳ್ಳುವ ಮೂಲಕ ನಮಗೆ ಹಾಗೂ ನಮ್ಮ ಮುಂದಿನ ತಲೆಮಾರಿಗೆ ನೆಮ್ಮದಿ ಕಲ್ಪಿಸುವ ಪ್ರಯತ್ನ ನಡೆಸುವುದು ಈ ದಿನಾಚರಣೆಯ ಉದ್ದೇಶ.
ಹವಾಮಾನ ವೈಪರೀತ್ಯದಿಂದ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹವಾಮಾನ ತಜ್ಞರ ಕೆಲಸ ಅತ್ಯಂತ ಪ್ರಮುಖವಾಗಿರುತ್ತದೆ. ಕ್ರಿ.ಶ. 1873ರಲ್ಲಿ ಸ್ಥಾಪಿತವಾದ ಇಂಟರ್ನ್ಯಾಷನಲ್ ಮೆಟಿರಿಯಾಲಾಜಿಕಲ್ ಆರ್ಗನೈಜೇಶನ್ (ಐಎಂಒ) ಸ್ಥಾಪಿಸಲಾಯಿತು. 1950ರಲ್ಲಿ ಡಬ್ಲ್ಯುಎಂಒ ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿಯಾಗಿ ಮಾರ್ಪಟ್ಟಿತು. ಸಮುದ್ರದಿಂದ ಆವಿಯಾಗುವ ನೀರು ವಾತಾವರಣ ಸೇರುವ ಪ್ರಕ್ರಿಯೆಯಲ್ಲಿ ನೀಡಿದ ಅಪ್ರತಿಮ ಹಾಗೂ ಬೃಹತ್ ಕೊಡುಗೆ ಸ್ಮರಿಸುವುದು ಈ ದಿನದ ಮಹತ್ವವಾಗಿದೆ. ಈ ವರ್ಷದ ಧ್ಯೇಯ ವಾಕ್ಯವೂ ಇದಾಗಿದೆ.
ಯವಕರತ್ತ ಗಮನ: ಯುವಕರ ಪಾಲ್ಗೊಳ್ಳುವಿಕೆ ಪ್ರಸಕ್ತ ವರ್ಷದ ಪ್ರಮುಖ ವಸ್ತು ವಿಷಯವನ್ನಾಗಿ ಪರಿಗಣಿಸಲಾಗಿದೆ (ಝಿಜಝಿಜ್ಠ ಆಟಿಜ ಈಟಜಟಜಡಿ, ಜಟ್ಜಿಛ್ಜಜ ಝಿಜ ಘ್ಟ್ಡಝಿ). ಭೂಮಿಯ ಹವಾಮಾನ ಸ್ಥಿತಿ-ಗತಿ ಮತ್ತು ವಾಯುಗುಣ ಅರ್ಥೈಸಿಕೊಳ್ಳುವುದು, ಎದುರಾಗಬಹುದಾದ ಸಮಸ್ಯೆಗಳನ್ನು ನಿಖರವಾಗಿ ಅಂದಾಜಿಸಿ, ಅದರ ತೀವ್ರತೆ, ಪ್ರಹಸನಾತ್ಮಕವಾಗಿ ಯುವಕರಿಗೆ ತಿಳಿಸುವಲ್ಲಿ ಈ ದಿನಾಚರಣೆ ಹೆಚ್ಚಿನ ಮಹತ್ವ ನೀಡುತ್ತಿದೆ.
ಜಗತ್ತಿನ ಒಟ್ಟು ಜನಸಂಖ್ಯೆಯ ಆರನೇ ಭಾಗದಷ್ಟು ಯುವಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ದಶಕಕ್ಕೆ ಹೋಲಿಕೆ ಮಾಡಿದಲ್ಲಿ ಇಂದಿನ ಯುವ ಸಮುದಾಯ ಆರೋಗ್ಯ, ಶಿಕ್ಷಣ ಸೇರಿದಂತೆ ಅಭಿವೃದ್ಧಿಶೀಲತೆ ಹೆಚ್ಚು ಮೈಗೂಡಿಸಿಕೊಂಡಿದ್ದಾರೆ. ಹವಾಮಾನದ ವೈಪರೀತ್ಯದಿಂದ ಈ ಎಲ್ಲ ಸಮಸ್ಯೆಗಳು ಉಲ್ಬಣಗೊಂಡಿರುವ ಕಾರಣದಿಂದಾಗಿ ಇಂದಿನ ಯುವಕರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದೆ. ಇದರ ಗಂಭೀರ ಪರಿಣಾಮ ಮುಂಬರುವ ದಿನಗಳಿಗೂ ಬಾಧಿಸಬಹುದು. ವಾತಾವರಣ ಮತ್ತು ಸಮುದ್ರ ಉಷ್ಣತಾ ಪರಿಣಾಮಗಳು ತೀವ್ರವಾಗಿ ಹೆಚ್ಚುತ್ತಲೆ ಇವೆ. ಹಿಮಪ್ರವಾಹ, ಐಸ್ ಕ್ಯಾಪ್ಗಳು ಕುಗ್ಗುತ್ತಲೇ ಸಾಗಿವೆ. ಸಮುದ್ರಮಟ್ಟ ಹೆಚ್ಚುತ್ತಲಿದೆ ಮತ್ತು ವಾಯುಮಂಡಲದಲ್ಲಿ ಏರುಪೇರುಗಳು ಸಾಮಾನ್ಯವೆನಿಸಿವೆ.
ವಾಯುಮಂಡಲದ ವ್ಯವಸ್ಥೆಯಲ್ಲಿ ಮಾನವನ ಪ್ರಭಾವವು ಸಂಶಯಾತೀತವಾಗಿದ್ದು, ಅತ್ಯಂತ ಸ್ಪಷ್ಟವಾಗಿದೆ. 'ಹಸಿರುಮನೆ ಅನಿಲ'ಗಳ ಪ್ರಭಾವ ಹೆಚ್ಚುತ್ತಿದೆ. ಪೂರ್ವಕಾಲದ ಇಂಧನವನ್ನೇ ನಾವು ನಂಬಿ ನೆಚ್ಚಿ ಕುಳಿತಿದ್ದರೆ ಮುಂದೊದು ದಿನ ಬಿಸಿ ತಟ್ಟಲಿದೆ. ಔದ್ಯೋಗೀಕರಣದ ಪೂರ್ವದ ದಿನಗಳಗಿಂತ ಶತಮಾನದ ಅಂತ್ಯ ಕಾಲದಲ್ಲಿ ನಾಲ್ಕು ಡಿಗ್ರಿ ಸೆಲ್ಸಿಯಸ್ದಷ್ಟು ಹೆಚ್ಚು ತಾಪಮಾನ ಏರಿಕೆ ಕಂಡುಬಂದಿರುವುದು ಪ್ರಮುಖ ಸಾಕ್ಷಿಯಾಗಿದೆ.
ಬದಲಾವಣೆ ತರುವಲ್ಲಿ ಯುವ ಸಮೂಹದ ಪಾತ್ರ ಹಿರಿದು. ಉತ್ತಮ ಹವಾಮಾನ ಕಾಪಾಡಲು ಇಂತಹ ಯುವ ಸಮೂಹ ಮುಂದಾಗಬೇಕು. ಹೊಸ ಪದ್ಧತಿ ಅನುಸರಿಸುವಲ್ಲಿ ಯುವ ಜನತೆಯಲ್ಲಿ ಬತ್ತದ ಉತ್ಸಾಹವಿದ್ದು, ಸಮಸ್ಯೆಗಳ ಬಗ್ಗೆ ಸೂಕ್ಷ ಪರಿಜ್ಞಾನ ಹೊಂದಬೇಕಾಗಿದೆ.
ವಾತಾವರಣ, ಸಮುದ್ರ, ಭೂಮಿ, ನೀರು ಇವುಗಳ ವೈಜ್ಞಾನಿಕ ತಿಳಿವಳಿಕೆ, ಉತ್ಪತ್ತಿಯ ಪರಸ್ಪರ ಕಾರ್ಯ ವಿಧಾನಗಳು ಕ್ರಮೇಣ ಸುಧಾರಿಸುತ್ತಲಿವೆ. ಈಗಾಗಲೆ ಡಬ್ಲ್ಯುಎಂಒ ಅವುಗಳಲ್ಲಿ ತಿಳಿವಳಿಕೆ, ಮುನ್ಸೂಚನೆ ಅರಿಯಲು ಉಪಕರಣ ಅಭಿವೃದ್ಧಿಪಡಿಸಿವೆ. ಮುಂದಿನ ದಶಕಗಳಲ್ಲಿ ಇವು ಭಾರಿ ಪ್ರಮಾಣದಲ್ಲಿ ಉಪಯುಕ್ತವಾಗಲಿವೆ. ವಾತಾವರಣವನ್ನು ಅಂದಾಜಿಸುವ ಸಾಮರ್ಥ್ಯ ವೃದ್ಧಿಸಲಿದೆ. ಪ್ರವಾಹ, ಸುಂಟರಗಾಳಿ, ಬಿಸಿ ಅಲೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದ್ದು, ಇದು ರೈತರಿಗೂ ವರದಾನವಾಗಲಿದೆ. ಹವಾಮಾನ ದಿನಾಚರಣೆಯನ್ನು ಪ್ರಥಮ ಬಾರಿಗೆ ಇಷ್ಟೊಂದು ವಿಶೇಷವಾಗಿ ಆಚರಣೆ ಮಾಡುತ್ತಿರುವುದರಿಂದ ಆಗುವ ಲಾಭಗಳ ಬಗ್ಗೆ ಯೋಚಿಸೋಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

