ಭ್ರಷ್ಟಾಚಾರ ವಿರೋಧಿ ಪಕ್ಷ ಎಎಪಿಗೆ ಮತದಾರರ ಬೆಂಬಲ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 28
ರಾಜ್ಯದ ಖನಿಜ ಸಂಪತ್ತು, ಶಿಲಾ ಸಂಪತ್ತು ಮತ್ತು ರೈತರ ಭೂಮಿ ಕೊಳ್ಳೆ ಹೊಡೆದ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದು, ರಾಜ್ಯದ ಜನರು ಭ್ರಷ್ಟಾಚಾರ ವಿರೋಧಿ ಪಕ್ಷ ಆಮ್ ಆದ್ಮಿಯ ಅಭ್ಯರ್ಥಿ ಶಿವಕುಮಾರ್ ಮಾಳಗಿ ಬೆಂಬಲಿಸಲಿದ್ದಾರೆ ಎಂದು ಜನ ಸಂಗ್ರಾಮ್ ಪರಿಷತ್ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಆಮ್ ಆದ್ಮಿ ಪಕ್ಷದಿಂದ ನಡೆಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಖನಿಜ ಸಂಪತ್ತು ಗಣಿಗಾರಿಕೆಯನ್ನು ಬಿಜೆಪಿ, ಕಾಂಗ್ರೆಸ್, ಮತ್ತು ಜೆಡಿಎಸ್ನವರು ಮೂರು ಪಕ್ಷದವರು ಕೊಳ್ಳೆ ಹೊಡೆದಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಜನಪ್ರತಿನಿಧಿಗಳು ಕಾವಲು ನಿಲ್ಲಬೇಕು, ಅದು ಬಿಟ್ಟು ಜನಪ್ರತಿನಿಧಿಗಳೇ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆದರೆ ಹೇಗೆ? 11.90 ಲಕ್ಷ ಎಕರೆ ಭೂಮಿಯನ್ನು ಮೂರು ಪಕ್ಷಗಳು ಕಬಳಿಸಿವೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಬಳ್ಳಾರಿ ಲೋಕಸಭೆ ಅಭ್ಯರ್ಥಿ ಶಿವಕುಮಾರ್ ಮಾಳಗಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಾಮುಲು ಅವರು ನರೇಂದ್ರ ಮೋದಿ ಹೆಸರು ಹೇಳಿಕೊಂಡು ಕಿಂದರಜೋಗಿಯಂತೆ ಬೀದಿ ನಾಟಕವನ್ನಾಡುತ್ತಾ ಜನರನ್ನು ಮರಳುಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಆಮ್ ಆದ್ಮಿಯ ಮುಖಂಡರಾದ ಡಾ. ವಿಜಯ ಮಹಾಂತೇಶ್, ಎಂ. ಕುಮಾರಸ್ವಾಮಿ, ಸುಭಾಷ್ ಹಿರೇಮಠ್, ಹರೀಶ್ ನಾಯ್ಕ, ಟಿ. ರಾಮಪ್ಪ, ಮಲ್ಲನಗೌಡ, ಮುಕ್ತಿಯಾರ್, ಜೆ. ವೀರನಗೌಡ, ಅರುಣ್ ಶೇಖ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

