ವಿವಾಹ ಸಿರಿವಂತಿಕೆ ಪ್ರದರ್ಶನವಾಗದಿರಲಿ
ಹಗರಿಬೊಮ್ಮನಹಳ್ಳಿ: ವಿವಾಹಗಳು ಸಂಪತ್ತಿನ ದೌಲತ್ತನ್ನು ವೈಭವಿಕರಿಸುವ ಇಲ್ಲವೆ ಸಿರಿವಂತಿಕೆ ಪ್ರದರ್ಶಿಸುವ ಆಡಂಬರದಿಂದ ಇರದೆ ಉಳಿತಾಯ, ಸರಳತೆ ತತ್ವ ಬಿಂಬಿಸುವ ಮೂಲಕ ಜನಸಾಮಾನ್ಯರನ್ನೂ ಸರಳ ಬದುಕು ಸಾಗಿಸಲು ಪ್ರೇರೇಪಿಸಬೇಕೆಂದು ವೀರಶೈವ ಪಂಚಮಸಾಲಿ ಸಮಾಜದ ಹರಿಹರ ಗುರುಪೀಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಶುಕ್ರವಾರ ಮಧ್ಯಾಹ್ನ ತಾಲೂಕಿನ ಗಡಿಗ್ರಾಮ ಮೊರಗೇರಿಯಲ್ಲಿ ಬಸವ ಜಯಂತಿ ನಿಮಿತ್ತ ಗ್ರಾಮದ ವೀರಶೈವ ಲಿಂಗಾಯತ ಸಮಾಜದವರು ವೀರಶೈವರಿಗಾಗಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ವರ್ಗದಲ್ಲೂ ಸಾಮೂಹಿಕ ವಿವಾಹಗಳು ಹೆಚ್ಚಾದರೆ ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಇಂಥ ವಿವಾಹಗಳಿಗೆ ಎಲ್ಲರೂ ಸಹಕಾರ, ಬೆಂಬಲ ನೀಡಬೇಕು ಎಂದರು.
ತರಬಾಳು ಸಿರಿಗೇರಿ ಮಠದ ಪೀಠಾಧೀಶ ಶಿವಕುಮಾರ ಸ್ವಾಮೀಜಿ ಮಾತನಾಡಿ, ಮಿತ ಸಂತಾನ ಪಾಲಿಸುವ ಮೂಲಕ ಜನಸಂಖ್ಯೆ ಸ್ಫೋಟ ತಡೆದು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಿ. ಹೊಂದಾಣಿಕೆ ಜೀವನ, ಸಾಮರಸ್ಯ ಕಾಪಾಡಿ ಕುಟುಂಬದಲ್ಲಿ ಸ್ನೇಹಪರತೆ ಹೆಚ್ಚು ಇರುವಂತೆ ನೋಡಿಕೊಳ್ಳಿ. ಅದರಿಂದ ಕೌಟುಂಬಿಕ ಕಲಹಗಳು ಕಡಿಮೆಯಾಗುತ್ತವೆ ಎಂದು ನೂತನ ದಂಪತಿಗಳಿಗೆ ಹೇಳಿದರು.
15 ಜೋಡಿ ಹೊಸ ಬಾಳಿಗೆ ಕಾಲಿಟ್ಟರು. ವೀರಶೈವ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಅಕ್ಕಿ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪ್ರಧಾನ ಅಕ್ಕಿ ಕೊಟ್ರಪ್ಪ ಚಾಲನೆ ನೀಡಿದರು. ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಮುಖಂಡ ಜೆ.ಬಿ. ಶರಣಪ್ಪ, ಜಿಪಂ ಸದಸ್ಯೆ ಕೊಗಳಿ ಕರಿಬಸವನಗೌಡ್ರ ರತ್ನಮ್ಮ ಸಿದ್ಧಲಿಂಗನಗೌಡ, ತಾಪಂ ಸದಸ್ಯೆ ಭಾರತಮ್ಮ ಬೆಲ್ಲದ್, ವೀರಶೈವ ಪಂಚಮಸಾಲಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಉತ್ತಂಗಿ ರವಿ, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ರವಿ ಭಾಗವಹಿಸಿದ್ದರು. ಶಿಕ್ಷಕ ಬಾವಿ ರವಿ ಭಾಷಣ ಮಾಡಿದರು. ಸಂಗಮ್ಮ ಬಸವಣ್ಣನವರ ವಚನಗಳನ್ನು ಪ್ರಸ್ತುತಪಡಿಸಿದರು. ಎಂ. ನಾಗರಾಜ ಸ್ವಾಗತಿಸಿ, ಸಿ. ಜಗದೀಶ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

