ಬಳ್ಳಾರಿ

ತೇರಿಗೆ ಕೋಳಿ ತೂರುವ ವಿಶಿಷ್ಟ ರಥೋತ್ಸವ

Published On :

ಕೊಟ್ಟೂರು: ಜೀವಂತ ಕೋಳಿಗಳನ್ನು ತೂರಾಡುವ ವಿಶಿಷ್ಟ ಹಬ್ಬ ಎಂದೇ ಹೆಸರಾಗಿರುವ ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವ, ಆಗಿ ಹುಣ್ಣಿಮೆಯ ದಿನವಾದ ಬುಧವಾರ ಗೋಧೂಳಿ ಸಮಯದಲ್ಲಿ ನಡೆಯಿತು.
ಪಟ್ಟಣದ ಹೊರವಲಯದ ಕೆರೆ ದಂಡೆಯ ಮೇಲಿರುವ ಬಿಕ್ಕಿಮರಡಿ ರಥೋತ್ಸವಕ್ಕೆ ಸಂಜೆ 6.15ಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಜೈಕಾರ ಕೂಗಿ, ಕೋಳಿಗಳನ್ನು  ತೇರಿಗೆ ತೂರಿ ನಮಸ್ಕರಿಸಿದರು. ಇದಕ್ಕೂ ಮೊದಲು ಬಿಕ್ಕಿಮರಡಿ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಪಟ್ಟಣದ ಮೇಗೇರಿ ನಾಯಕ ಜನಾಂಗದವರು ರಥವಿರುವ ಜಾಗಕ್ಕೆ ಸಂಪ್ರದಾಯಬದ್ಧವಾಗಿ ತಂದರು. ಇದಾದ ಅನಂತರ ಗುಡಿಯಲ್ಲಿ ವಿವಿಧ ಬಗೆಯ ಸೇವೆಗಳನ್ನು ದೇವಿಗೆ ಸಲ್ಲಿಸಲಾಯಿತು. ರಥೋತ್ಸವಕ್ಕೆ ಚಾಲನೆ ದೊರಕುವ ಮುನ್ನ ದುರುಗಮ್ಮ ದೇವಿ ಪಟಾಕಿ ಹರಾಜು ನಡೆಯಿತು. ಗಂಗಮ್ಮನಹಳ್ಳಿಯ ಮಾರೆಪ್ಪ ರು. 22,101ಗಳಿಗೆ ಪಟಾಕಿ ತನ್ನದಾಗಿಸಿಕೊಂಡರು. ರಥವನ್ನು ಎಳೆಯುವಾಗ ಭಕ್ತರು ತಾವು ತಂದಿದ್ದ ಕೋಳಿಗಳನ್ನು ತೂರಿ ದೇವಿಗೆ ನಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.