ಬಳ್ಳಾರಿ

ವೀರಶೈವ ಧರ್ಮ ವಿಶ್ವ ವ್ಯಾಪಿ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಮೇ 25
ಜಾಗತಿಕ ಧರ್ಮಗಳನ್ನು ಮೀರಿ ನಿಲ್ಲುವ ಶಕ್ತಿ ವೀರಶೈವ ಧರ್ಮಕ್ಕಿದೆ ಎಂದು ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಹ ಪ್ರಾಧ್ಯಾಪಕ ಟಿ.ಎಚ್. ಬಸವರಾಜ್ ಹೇಳಿದರು.
ಇಲ್ಲಿನ ಬೂದಗುಂಪಿ ವೀರಭದ್ರಪ್ಪನವರ ನಿವಾಸದಲ್ಲಿ ಅವರ ಮಾತಾಪಿತೃಗಳಾದ ಬೂದಗುಂಪಿ ಶಂಕ್ರಮ್ಮ ಮತ್ತು ವಿರೂಪಾಕ್ಷಪ್ಪನವರ ಜ್ಞಾನದಾಸೋಹದಡಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಂಪ್ಲಿ ಹೋಬಳಿ ಘಟಕ ಹಮ್ಮಿಕೊಂಡಿದ್ದ 46ನೇ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.   ವೀರಶೈವ ಧರ್ಮ ಹೆಚ್ಚು ವಿಮರ್ಶೆಗೀಡಾಗುವ ಸಾಮರ್ಥ್ಯ ಹೊಂದಿದೆ. ಸಮಾನತೆ, ಜಾತ್ಯತೀತತೆ ಮತ್ತು ಸಮಗ್ರತೆಗೆ ಬಸವ ತತ್ವ ರಾಮಬಾಣವಾಗಿದೆ. ಪ್ರಸ್ತುತ ದಿನಮಾನಗಳಲ್ಲಿನ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ, ಹಸಿವು ಮತ್ತು ಅಜ್ಞಾನ ನಿವಾರಣೆಗೆ ನಿತ್ಯ ಜೀವನದಲ್ಲಿ ಬಸವ ತತ್ವದ ಅಳವಡಿಕೆಯ ಅಗತ್ಯತೆಯಿದೆ ಎಂದು ತಿಳಿಸಿದರು.  
ಕಲ್ಯಾಣಚೌಕಿ ಮಠ ಚನ್ನಮಲ್ಲಯ್ಯ ಶಾಸ್ತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ, ಶರಣ ಸಾಹಿತ್ಯ ಮನೆ ಮತ್ತು ಮನಗಳಿಗೆ ತಲುಪಿಸಲು ಮುಂದಾಗಬೇಕಾಗಿದೆ. ಶರಣ ಸಾಹಿತ್ಯ ಪ್ರಚುರತೆಯಲ್ಲಿ ಮತ್ತು ಅಳವಡಿಕೆಯಲ್ಲಿ ಸಮನ್ವಯ ಸಾಧಿಸಬೇಕಾಗಿದೆ ಎಂದು ಹೇಳಿದರು. 50 ವರ್ಷ ದಾಂಪತ್ಯ ಜೀವನ ಪೂರೈಸಿದ ದಾಸೋಹಿ ಬೂದಗುಂಪಿ ವೀರಭದ್ರಪ್ಪ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಹೊಸಮಠ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಸಾಹಿತ್ಯ ಸಿರಿ ಪ್ರತಿಷ್ಠಾನ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿದರು. ಮುಕ್ಕುಂದಿ ಬಸವರಾಜ್ ಸ್ವಾಗತಿಸಿದರು. ಬಂಗಿ ದೊಡ್ಡ ಮಂಜುನಾಥ್ ನಿರೂಪಿಸಿದರು. ಕೆ.ಎಂ. ರುದ್ರಮುನಿಸ್ವಾಮಿ ವಂದಿಸಿದರು. ಸುನೀತಾ ಮತ್ತು ನೇತ್ರಾ ಪ್ರಾರ್ಥಿಸಿದರು. ಮಹಾಮನೆಯಲ್ಲಿ ಕೆ.ಯಂಕಾರೆಡ್ಡಿ, ಟಿ.ರುದ್ರಪ್ಪ, ಬೂದಗುಂಪಿ ಹುಸೇನ್ ಸಾಬ್, ಎಂ.ಹುಲುಗಪ್ಪ, ಸೋಮಪ್ಪ, ಸರೋದೆ ಯಮನಪ್ಪ, ವೈ.ಪ್ರಭಾಕರ ಶ್ರೇಷ್ಠಿ, ಜಾಜಿ ಸೂಗೂರಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.