ಬಳ್ಳಾರಿ

ರೈಸ್ ಮಿಲ್ ಮಾಲೀಕರ ಹುಡುಕುವಂತೆ ಮನವಿ

Published On :

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದ ರೈತರಿಂದ ಬತ್ತ ಖರೀದಿಸಿ ಹಣ ನೀಡದೆ ನಾಪತ್ತೆಯಾಗಿರುವ ಸ್ಥಳೀಯ ಸೂರ್ಯ ರೈಸ್ ಮಿಲ್ ಮಾಲೀಕ ಗಿರೀಶ್ ಶೆಟ್ಟಿಯವರನ್ನು ಹುಡುಕಿ, ರೈತರ ಹಣವನ್ನು ಕೊಡಿಸುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋರ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಜಿ. ಪುರುಷೋತ್ತಮಗೌಡ  ಮನವಿ ಸಲ್ಲಿಸಿದ್ದಾರೆ.
ಸ್ಥಳೀಯ ರೈತರಿಂದ ಸುಮಾರು ಐದುವರೆ ಕೋಟಿ ರು. ಮೌಲ್ಯದ ಬತ್ತ ಖರೀದಿಸಿರುವ ಸೂರ್ಯ ರೈಸ್ ಮಿಲ್ ಮಾಲೀಕ ಗಿರೀಶ್ ಶೆಟ್ಟಿ, ಇದೀಗ ಖರೀದಿಸಿದ ಬತ್ತಕ್ಕೆ ಹಣ ನೀಡದೆ, ಮಿಲ್‌ಗೆ ಬೀಗ ಹಾಕಿ ನೂರಾರು ರೈತರನ್ನು ವಂಚಿಸಿದ್ದಾನೆ. ಒಂದು ವೇಳೆ ಹಣ ನೀಡದಿದ್ದಲ್ಲಿ ರೈತ ಕುಟುಂಬಗಳೆಲ್ಲವೂ ಬೀದಿ ಪಾಲಾಗಲಿದ್ದು, ಬತ್ತ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಮೊರೆ ಹೋಗುವ ಸಂಭವವಿದೆ. ಹೀಗಾಗಿ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ನಾಪತ್ತೆಯಾಗಿರುವ ವಂಚಕ ಗಿರೀಶ್‌ನ ಹಿಡಿದು, ರೈತರ ಬಾಕಿ ಹಣ ಹಿಂತಿರುಗಿಸಿ, ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ನಾಳೆ ಕುಂದುಕೊರತೆ ಸಭೆ
ಹೊಸಪೇಟೆ: ಜೆಸ್ಕಾಂ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಅಹವಾಲು ಸ್ವೀಕರಿಸುವ ಸಭೆಯು ಮೇ 27ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಜೆಸ್ಕಾಂಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಲು ಹಾಗೂ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಕುಂದುಕೊರತೆ ಹೇಳಿಕೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.