ಗುಲ್ಬರ್ಗ ಪ್ರಾದೇಶಿಕ ಆಯುಕ್ತರಾಗಿ ಬಿಸ್ವಾಸ್
ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಇದೀಗ ರಾಜ್ಯ ಸರ್ಕಾರವು ಗುಲ್ಬರ್ಗ ಪ್ರಾದೇಶಿಕ ಆಯುಕ್ತರಾಗಿ ಮುಂಬಡ್ತಿ ನೀಡಿ, ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ಧಾರವಾಡ ಜಿಲ್ಲಾಧಿಕಾರಿಯಾಗಿರುವ ಸಮೀರ್ ಶುಕ್ಲ ಆಗಮಿಸುವ ಸಾಧ್ಯತೆ ಇದೆ.
ಫೆ. 21, 2011ರಿಂದ ಬಳ್ಳಾರಿಯಲ್ಲಿ 3 ವರ್ಷ 3 ತಿಂಗಳ ಕಾಲ ಬಿಸ್ವಾಸ್ ಅವರು ಡಿಸಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರೆಡ್ಡಿ ಹಾಗೂ ಶ್ರೀರಾಮುಲು ಅವರ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನವಾಗಿ ಕಾಡಿದ್ದರು. ದಕ್ಷ ಅಧಿಕಾರಿ ಎಂದು ಹೆಸರು ಗಳಿಸುವುದರೊಂದಿಗೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದರೂ ಎಂಬ ಆರೋಪವನ್ನು ಬಿಜೆಪಿ ಮಾಡುವ ಮೂಲಕ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು.
ಒಬ್ಬ ವ್ಯಕ್ತಿ ಹಲವು ಹುದ್ದೆಗಳನ್ನು ಅಲಂಕರಿಸುವ ಮೂಲಕ ಆಡಳಿತ ನಡೆಸಿದ್ದು, ಆರಂಭದಲ್ಲಿ ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಅವರೊಂದಿಗೆ ಕೋಟೆ ಪ್ರದೇಶದಲ್ಲಿ ವಾಗ್ವಾದ ನಡೆಸಿದ್ದು, ಇವರ ದಕ್ಷ ಅಧಿಕಾರಿ ಎಂಬ ಮಾತನಾಡಿಕೊಳ್ಳುವಂತೆ ಮಾಡಿತ್ತು, ಕಾರಣ ಅವರ ವಿರುದ್ಧವಾಗಿ ಎಂತಹ ಅಧಿಕಾರಿ ಅಥವಾ ರಾಜಕಾರಣಿಯಾಗಲಿ ಮಾತನಾಡದ ಕಾಲದಲ್ಲಿ ವಾಗ್ವಾದ ನಡೆಸಿದ್ದು ಮಾತ್ರ ಎಲ್ಲರ ಗಮನ ಸೆಳೆದಿತ್ತು. ಕಾಲಾಂತರದಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಅವರ ಮೇಲೆ ಕೇಳಿ ಬಂದಿತ್ತು.
ಒಬ್ಬ ಅಧಿಕಾರಿ ಎಂದ ಮೇಲೆ ಆರೋಪ ಮಾಡುವುದು ಸಹಜ. ಆದರೂ ಅವರ ಕಾಲದಲ್ಲಿ ಆಗಿರುವ ಫುಟ್ಬಾಲ್ ಕ್ರೀಡಾಂಗಣ, ಸೈನ್ಸ್ ಸೆಂಟರ್ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳು ಮಾತ್ರ ಸ್ಮರಣೀಯವಾಗಿವೆ. ಅಲ್ಲದೆ ಅಧಿಕಾರಿಗಳೂ ಇವರು ಸಿಂಹ ಸ್ವಪ್ನರಾಗಿದ್ದರೂ ಅವರ ಆದೇಶವನ್ನು ಎಲ್ಲಾ ಅಧಿಕಾರಿಗಳು ಚಾಚು ತಪ್ಪದೇ ಪಾಲಿಸುತ್ತಿದ್ದರು. ಪ್ರಭಾರಿಯಾಗಿ ಗುಲ್ಬರ್ಗ ಪ್ರಾದೇಶಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಮುಂಬಡ್ತಿ ಪಡೆದು ಗುಲ್ಬರ್ಗ ಪ್ರಾದೇಶಿಕ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.
ಇದೀಗ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮೀರ್ ಶುಕ್ಲ ಅವರು ಇದೀಗ ಬಳ್ಳಾರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ಬೀದರ್ ಜಿಲ್ಲಾಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

