ನವೀಕೃತ ಇಂಧನ ಅಭಿವೃದ್ಧಿಗೆ ಒತ್ತಾಯ
ದಾವಣಗೆರೆ: ದೇಶದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಹೊಸದಾಗಿ ಇಂಧನ ಮೂಲಗಳ ಸಾಂಧ್ರತೆ ಹೆಚ್ಚಿಸಲು, ವಿದ್ಯುತ್ ಶಕ್ತಿ ಉತ್ಪಾದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ. ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ಕುರಿತಂತೆ ಸಂಸತ್ತಿನಲ್ಲಿ ಚಿಕ್ಕೆ ಗುರುತಿನ ಪ್ರಶ್ನೆ ಕೇಳಿದ ಅವರು, ವಿವಿಧ ಯೋಜನೆ ಅನುಷ್ಠಾನ, ಹಲವಾರು ಮೂಲಗಳಿಂದ ದೇಶದಲ್ಲಿ ವಿದ್ಯುತ್ ಶಕ್ತಿ ಉತ್ಪಾದಿಸಲು ನಿಗದಿಪಡಿಸಿದ ಗುರಿ ಮತ್ತು ಸಾಧನೆ, ನವೀಕರಿಸಬಹುದಾದ ಇಂಧನ ಮೂಲಗಳ ಘಟಕಗಳ ಸ್ಥಾಪನೆಗೆ ನೀಡುವ ಪ್ರೋತ್ಸಾಹ ಕುರಿತಂತೆ ಮಾಹಿತಿ ನೀಡಲು ಕೇಂದ್ರ ನವೀಕರಿಸಬಹುದಾದ ಇಂಧನಗಳ ಖಾತೆ ಸಚಿವ ಡಾ. ಫಾರುಕ್ ಅಬ್ದುಲ್ರನ್ನು ಆಗ್ರಹಿಸಿದರು. ಸಚಿವ ಡಾ. ಫಾರುಕ್ ಅಬ್ದುಲ್ಲಾ ಮಾತನಾಡಿ, ನವೀಕರಿಸಬಹುದಾದ ಇಂಧನಗಳ ಇಲಾಖೆಯಿಂದ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ, ವಿಂಡ್ ಪವರ್, ಬಯೋ ಪವರ್, 25 ಮೆಗಾವ್ಯಾಟ್ ಸಾಮರ್ಥ್ಯದ ಸ್ಮಾಲ್ ಹೈಡ್ರೋ ಪವರ್, ಸೋಲಾರ್ ಪವರ್ ಗ್ರಿಡ್, ಗುಡ್ಡಗಾಡು ಪ್ರದೇಶದ ಜನ ವಸತಿಗಳಿಗೆ ವಿದ್ಯುದೀಕರಣ ಪ್ರಮುಖವಾದ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

