ಗದಗ

ಬಿಜೆಪಿ ಗೋಮುಖ ವ್ಯಾಘ್ರ: ವಿಶ್ವನಾಥ ಜಿಡ್ಡಿಬಾಗಿಲ

Published On :

ರೋಣ: ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ, ಗುಂಪುಗಾರಿಕೆ ನಡೆಸುತ್ತಿರುವ ಬಿಜೆಪಿಯು ಗೋಮುಖ ವ್ಯಾಘ್ರವಿದ್ದಂತೆ ಎಂದು ಯುವ ಮುಖಂಡ ವಿಶ್ವನಾಥ ಜಿಡ್ಡಿಬಾಗಿಲ ಹೇಳಿದರು.
ಅವರು ಬುಧವಾರ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ಧ ಕಾಂಗ್ರೆಸ್,ಗೆ ಬನ್ನಿ ಬದಲಾವಣೆ ತನ್ನಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್,ಗೆ ಸೇರ್ಪಡೆಗೊಂಡು ಮಾತನಾಡಿದರು. ಸಚಿವ ಕಳಕಪ್ಪ ಬಂಡಿಯವರು ರೋಣ ಪಟ್ಟಣದ ಅಭಿವೃದ್ಧಿ ಹಾಗೂ ಇಲ್ಲಿಯ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಬಾಳು ಇರುವುದನ್ನು ಮರೆತ ಸ್ಥಳೀಯ ಸಚಿವರು ತಮ್ಮ ಇಚ್ಛೆಯಂತೆ ಒಂದೇ ಸಮುದಾಯವನ್ನು ಮೆಚ್ಚಿಸಿದ್ದು ಜನ ವಿರೋಧಿ ನೀತಿಯಾಗಿದೆ. ಕಾರಣ ಯಾವುದೇ ಒಂದು ಸಮುದಾಯ ಅಭ್ಯರ್ಥಿಗೆ ಮತ ಹಾಕಿದರೆ ಗೆಲ್ಲಲಿಕ್ಕೆ ಆಗುವುದಿಲ್ಲ. ಸರ್ವ ಸಮಾಜದವರು ಅಭ್ಯರ್ಥಿಪರ ಮತ ಚಲಾಯಿಸಿದಾಗ ಮಾತ್ರ ಗೆಲ್ಲಲು ಸಾಧ್ಯ ಎಂದರು.  ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷವು ಸಮುದಾಯದ ಏಳ್ಗೆಯನ್ನು ಬಯಸುತ್ತದೆ ಹೊರತು ವ್ಯಕ್ತಿಯ ಏಳ್ಗೆಯನ್ನಲ್ಲ. ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಅವಲೋಕಿಸಿದಾಗ ಮುಂದಿನ ದಿನಗಳಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಯುವ ಮುಖಂಡ ಅಶೋಕ ದೇಶಣ್ಣವರ ಮಾತನಾಡಿದರು. ನೂರಾರು ಕಾರ್ಯಕರ್ತರು ಕಾಂಗ್ರೆಸ್,ಗೆ ಸೇರ್ಪಡೆಗೊಂಡರು. ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ, ಮಿಥುನ್ ಪಾಟೀಲ, ಡಾ. ಪ್ರಶಾಂತ ಪಾಟೀಲ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಪ್ರಭು ಮೇಟಿ, ವೀರಣ್ಣ ಶೆಟ್ಟರ, ವಿ.ಆರ್. ಗುಡಿಸಾಗರ, ಸಂಗು ನವಲಗುಂದ, ಕೆ.ಕೆ. ಮುಲ್ಲಾ, ವಿ.ಆರ್. ಗುಡಿಸಾಗರ, ಶೇಖರಪ್ಪ ಸುಂಕದ, ವೆಂಕಣ್ಣ ಬಂಗಾರಿ, ಹುಚ್ಚಪ್ಪ ನವಲಗುಂದ, ಶಿವಪ್ಪ ಬ್ಯಾಳಿ, ಮಂಜುನಾಥ ಹಾಳಕೇರಿ, ಇಮಾಮಸಾಬ ಕೋಲಕಾರ, ಅಪ್ಪು ಗಿರಡ್ಡಿ, ಉಮೇಶ ಕಿರೆಸೂರ ಉಪಸ್ಥಿತರಿದ್ದರು. ಅಜೀಜ ಯಲಿಗಾರ ಸ್ವಾಗತಿಸಿದರು. ಸುಭಾಸ ಗಡಗಿ ನಿರೂಪಿಸಿದರು. ಶಫೀಕ ಮೂಗನೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.