ಸಿ.ಸಿ. ಪಾಟೀಲ್ ಆರೋಗ್ಯಕ್ಕಾಗಿ ಪೂಜೆ
ಹೊಳೆಆಲೂರ : ಸಮೀಪದ ಕರಮುಡಿ ಗ್ರಾಮದ ಗುರುಹಿರಿಯರು ಮತ್ತು ಮಾರುತೇಶ್ವರ ಯುವಕ ಮಂಡಳದ ವತಿಯಿಂದ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನರಗುಂದ ಶಾಸಕ ಸಿ.ಸಿ. ಪಾಟೀಲರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ಗ್ರಾಮದ ಮಾರುತೇಶ್ವರನಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದರು. ಹನುಮಂತಗೌಡ ಸಂಕನಗೌಡ್ರ, ಬಸು ಪಟ್ಟಣಶೆಟ್ಟಿ, ಗುರು ಭಜಂತ್ರಿ, ಹನುಮಂತ ಕುರಹಟ್ಟಿ, ಭೀಮಪ್ಪ ಪೂಜಾರ, ಶಂಕರ ಸಂಕನಗೌಡ್ರ, ರಾಮನಗೌಡ ಮೆಣಸಗಿ, ಸಂಗು ಹೊಸಮನಿ, ನಾಗು ಹಳೆಗೌಡ್ರ, ಶಿವನಗೌಡ ಮೆಣಸಗಿ, ಸಂಜು ಸಂಕನಗೌಡ್ರ, ಮುತ್ತಪ್ಪ ಮಸಗಿ, ಶರಣಪ್ಪ ಹಂಚಿನಾಳ, ಮಹೇಶ ಪಾಟೀಲ, ಪರತಗೌಡ ಪಾಟೀಲ, ಹಸನ ನದಾಫ, ಎಂ.ಕೆ. ಪಾಟೀಲ, ಹನುಮಂತ ಹೂಗಾರ, ಕಲ್ಲಪ್ಪ ತಳವಾರ, ಮುತ್ತಪ್ಪ ಮಸಗಿ ಪಾಲ್ಗೊಂಡಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ ಹೊಸಳ್ಳಿ ಕಣಕ್ಕೆ
ರೋಣ: ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಾಲೂಕಿನ ಹೊಸಳ್ಳಿ ಗ್ರಾಮದ ದಲಿತ ಮುಖಂಡ ಪ್ರಕಾಶ ಹೊಸಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಹಲವಾರು ವರ್ಷಗಳ ಕಾಲ ಸಂಘಟನೆಯ ಮೂಲಕ ಗುರುತಿಸಿಕೊಂಡಿದ್ದು, ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

