ಗದಗ

ಬಿಜೆಪಿ ದುರಾಡಳಿತಕ್ಕೆ ಬೇಸತ್ತ ಜನತೆ: ಎಚ್.ಕೆ. ಪಾಟೀಲ್

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 4
ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತು, ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈಚೆಗೆ ಅವರು ತಾಲೂಕಿನ ಹರ್ತಿ ಗ್ರಾಮದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಕಳೆದ 5 ವರ್ಷದಲ್ಲಿ ರಾಜ್ಯದ ಸಾವಿರಾರು ಕೋಟಿ ಮೌಲ್ಯದ ಸಂಪತ್ತು ಲೂಟಿಯಾಗಿದೆ. ಬಿಜೆಪಿಯಲ್ಲಿ ಹೇಳುತ್ತಾ ಹೋದರೆ ಭ್ರಷ್ಟರ ಪಟ್ಟಿ ಏರುತ್ತಾ ಹೋಗುತ್ತದೆ. ವಚನ ಭ್ರಷ್ಟ ಬಿಜೆಪಿಗೆ ತಕ್ಕಪಾಠ ಕಲಿಸಬೇಕು. ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ರಾಜ್ಯ ಕಟ್ಟುವ ಕೆಲಸ ಮಾಡುವಲ್ಲಿ ಎಲ್ಲರೂ ಶ್ರಮಿಸಿ. ಕಾಂಗ್ರೆಸ್ ಪಕ್ಷದ ಮೇಲೆ ಜನರು ಇಟ್ಟಿರುವ ಪ್ರೀತಿ, ಗೌರವ, ವಿಶ್ವಾಸಕ್ಕೆ ನಮಗೆ ಸಂತೋಷ ತಂದಿದೆ. ಜನರು ಆಶೀರ್ವದಿಸಿ ಚುನಾಯಿಸುವಂತೆ ಕೋರಿದರು.
ಗ್ರಾಪಂ ಮಾಜಿ ಸದಸ್ಯ ಪಿ.ಎಸ್. ಪಾಟೀಲ ಪಕ್ಷದ ಸಿದ್ಧಾಂತಗಳ ಕುರಿತು ಮಾತನಾಡಿದರು. ಕುಬೇರಪ್ಪ ಬಂಗಿ, ಶಿವಪ್ಪ ಹುರಕಡ್ಲಿ, ವೀರಭದ್ರಪ್ಪ ನವಲಿ, ರಾಚಪ್ಪ ನವಲಿ, ಗ್ರಾಪಂ ಮಾಜಿ ಸದಸ್ಯ ವಿ.ಡಿ. ರಡ್ಡೇರ, ಚನ್ನಬಸಪ್ಪ ಅಸುಂಡಿ, ಬಸವರಾಜ ಕೋರಿಶೆಟ್ಟರ, ಹನುಮಂತಪ್ಪ ಹೊಸಳ್ಳಿ, ಎಂ.ಎನ್. ಪಾಟೀಲ, ಬಸವರಾಜ ಜವಲಿ, ಬಿ.ಸಿ. ಹೊಸೂರ, ಹನುಮಂತಪ್ಪ ಕಂಬಳಿ, ಹುಲಗೆಪ್ಪ ಹರ್ಲಾಪುರ, ಬಸಪ್ಪ ಹರ್ಲಾಪುರ, ಈರಪ್ಪ ಹೊನ್ನಪ್ಪನವರ, ಮೂಟೆಪ್ಪ ಲದ್ದಿ, ಯೋಗೇಶ ಒಪ್ಪತ್ತಯ್ಯನಮಠ, ವೀರಭದ್ರಪ್ಪ ಗಣಾಚಾರಿ ಮುಂತಾದವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಹರ್ಲಾಪುರ, ಎ.ಎಸ್. ಕೊಟ್ಟರಶೆಟ್ಟಿ, ಎಪಿಎಂಸಿ ಸದಸ್ಯೆ ಟೊಪಮ್ಮ ಹೊನ್ನಪ್ಪನವರ, ಮಾಜಿ ಅಧ್ಯಕ್ಷ ಟಿ.ಬಿ. ಮರೆಡ್ಡಿ, ಪಿ.ಎಂ. ಬಂದಕ್ಕನವರ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಅಪ್ಪಣ್ಣ ಇನಾಮತಿ, ಎಚ್.ಜಿ. ಹಿರೇಗೌಡರ, ಎಸ್.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಪ್ರಭು ಹುಡೇದ ಸ್ವಾಗತಿಸಿದರು. ಬಿ.ಬಿ. ಹೊನ್ನಪ್ಪನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.