ಗದಗ

ಶಾಸಕರಿಂದ ಕಾರ್ಯಕರ್ತರ ಕಡೆಗಣನೆ: ಆರೋಪ

Published On :

ಲಕ್ಷ್ಮೇಶ್ವರ:  ಶಾಸಕ ರಾಮಣ್ಣ ಲಮಾಣಿ ಪಟ್ಟಣದ ನಗರ ಘಟಕದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪಕ್ಷದ ಕಾರ್ಯಕ್ರಮಗಳಿಗೆ ಬಿಜೆಪಿಯ ಮೂಲ ಕಾರ್ಯಕರ್ತರನ್ನು ಹಾಗೂ ಯುವ ಘಟಕದ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಮಸ್ಸಿಗೆ ಬಂದಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಲಕ್ಷ್ಮೇಶ್ವರ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾಗಡಿ ಹಾಗೂ ಬಸವರಾಜ ಅರಳಿ ಹೇಳಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ರಾಮಣ್ಣ ಲಮಾಣಿ ಪಕ್ಷದ ಶಿಸ್ತುಬದ್ಧತೆ ಹಾಗೂ ಕಾರ್ಯಕರ್ತರನ್ನು ಮರೆತು ಚುನಾವಣಾ ಪ್ರಚಾರ ಮಾಡುತ್ತಿರುವುದು ನೋವು ತಂದಿದೆ. ಪಕ್ಷದ ಕಾರ್ಯಕರ್ತರು ಯಾರು ಎನ್ನವುದನ್ನು ತಿಳಿದುಕೊಳ್ಳದೆ, ವಿರೋಧ ಪಕ್ಷದ ಜನರಿಗೂ ಮಣೆ ಹಾಕುತ್ತಿರುವುದು ಬೇಸರದ ಸಂಗತಿ ಎಂದರು.
ವೀರಯ್ಯ ಕಳ್ಳಿಮಠ ಮಾತನಾಡಿ, ಪಕ್ಷದ ವರಿಷ್ಠರು ಹೇಳಿದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇವೆ. ನೂರಾರು ಕಾರ್ಯಕರ್ತರನ್ನು ಒಗ್ಗೂಡಿಸಿ ಕೆಲಸ ಮಾಡಬೇಕಾದ ಶಾಸಕರು ನಿಷ್ಠಾವಂತರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಪಕ್ಷದ ತತ್ವ -ಸಿದ್ಧಾಂತಗಳಿಗೆ ಬದ್ಧರಾಗಿರುವ ಕಾರ್ಯಕರ್ತರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದರು. ಲಕ್ಷ್ಮೇಶ್ವರ ನಗರ ಘಟಕದ ಅಧ್ಯಕ್ಷ ಚಂದ್ರು ಹಂಪಣ್ಣವರ, ಕಾರ್ಯದರ್ಶಿ ಗಿರೀಶ ಸಜ್ಜನರ, ನೀಲಪ್ಪ ಹತ್ತಿ, ಶ್ರೀಕಾಂತ ಪೂಜಾರ, ರಾಘವೇಂದ್ರ ಪೂಜಾರ, ಯಶವಂತ ಭಜಂತ್ರಿ, ನಿಂಗಪ್ಪ ಭಜಂತ್ರಿ, ಶಿವಾನಂದ ಲಿಂಗಶೆಟ್ಟಿ, ಮಹೇಶ ದಾನಿ, ವಿನಯ ಪಾಟೀಲ, ರಮೇಶ ಹೊಂಬಳ, ರಾಜು ಗುಡಗೇರಿ, ರವಿ ಗೋಡಿ ಹಾಗೂ ಸೂರಣಗಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.