ಗದಗ

ರಾಮಣ್ಣ ಲಮಾಣಿಗೆ ಬಿಜೆಪಿ ಟಿಕೆಟ್: ಪಕ್ಷದಲ್ಲೇ ಆಕ್ಷೇಪ

Published On :

ಲಕ್ಷ್ಮೇಶ್ವರ:  ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಮಣ್ಣ ಲಮಾಣಿಯವರಿಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ಪಕ್ಷದಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಲಮಾಣಿಯವರಿಗೆ ಟಿಕೆಟ್ ನೀಡಬಾರದು ಎಂದು ಕೆಲವರು ಆಗ್ರಹಿಸಿದ್ದಾರೆ. ಭಾನುವಾರ ಪಟ್ಟಣದಲ್ಲಿ ಬಿಜೆಪಿಯ ನಗರ ಘಟಕದ ಸಭೆಯನ್ನು ಕರೆಯಲಾಗಿತ್ತು. ಪಟ್ಟಣದ ಎಲ್ಲ ವಾರ್ಡ್‌ಗಳ ಕಾರ್ಯಕರ್ತರು, ಯುವ ಮೋರ್ಚಾ ಪದಾಧಿಕಾರಿಗಳು ಸೇರಿ ನಗರ ಚುನಾವಣಾ ಪಂಚ ಕಮಿಟಿ ನೇಮಿಸಲಾಯಿತು. ಸಭೆಯಲ್ಲಿ ಅಸಮಾಧಾನ ಹೊರಬಿದ್ದಿತು. ಆದಾಗ್ಯೂ ಪಕ್ಷ ರಾಮಣ್ಣ ಲಮಾಣಿಗೆ ಟಿಕೆಟ್ ನೀಡಿದ್ದೇ ಆದಲ್ಲಿ, ಯುಗಾದಿ ನಂತರ ನಗರ ಘಟಕದ ಎಲ್ಲ ಕಾರ್ಯಕರ್ತರು, ಕ್ಷೇತ್ರದಲ್ಲಿ ರಾಮಣ್ಣನವರ ವಿರುದ್ಧ ಅಪಸ್ವರ ಎತ್ತಿದ ಎಲ್ಲ ಟಿಕೆಟ್ ಆಕಾಂಕ್ಷಿಗಳು, ಹಿರಿಯ ಮುಖಂಡರು ಸೇರಿ ಸಭೆ ಕರೆದು ಬಂಡಾಯ ಅಭ್ಯರ್ಥಿ ನಿಲ್ಲಿಸಿ ಅವರ ಗೆಲುವಿಗೆ ಶ್ರಮಿಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾಗಡಿ ತಿಳಿಸಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಬಸವರಾಜ ಅರಳಿ ವಹಿಸಿದ್ದರು. ಯುವ ಮುಖಂಡ ನೀಲಪ್ಪ ಹತ್ತಿ, ಚಂದ್ರು ಹಂಪಣ್ಣವರ, ಗಿರೀಶ್ ಸಜ್ಜನ, ಅರುಣ ಪಾಟೀಲ, ರಾಘವೇಂದ್ರ ಪೂಜಾರ, ಮಹೇಶ್ ಹಾದಿಮನಿ, ದ್ಯಾಮಣ್ಣ ಕರೆತ್ತಿನ, ಮಂಜುನಾಥ ಶಿರಬಡಗಿ, ಗೌಡಪ್ಪಗೌಡ ಹೆಬ್ಬಾಳ, ಇಟ್ಟಣ್ಣ ಮಾಚೇನಹಳ್ಳಿ, ಮಂಜು ಕರೆತ್ತಿನ, ಕುಮಾರ ಪೂಜಾರ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.