ರಾಜಕೀಯದಲ್ಲಿ ಮಹಿಳೆಗೆ ಪ್ರಾಧಾನ್ಯ ನೀಡಿ
ಕನ್ನಡಪ್ರಭ ವಾರ್ತೆ, ಗದಗ, ಏ. 8
ಮಹಿಳೆಯರು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಪುರುಷ ಪ್ರಧಾನ ಸಮಾಜವೇ ಕಾರಣ ಎಂದು ದೂಷಿಸುವವರ ಮಧ್ಯೆಯೇ ನನಗೊಂದು ಸಣ್ಣ ವಿಚಾರ ಹೊಳೆಯಿತು. ಹೌದು, ಎಲ್ಲರೂ ದೂಷಣೆ ಮಾಡುವುದೇ ನಮ್ಮ ಕಾರ್ಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಹಾಗಾದ್ರೆ ಮಹಿಳೆಯರಾದ ನಾವೆಲ್ಲಾ ನಮ್ಮ ಕರ್ತವ್ಯವೇನು ? ರಾಜಕೀಯವಾಗಿ ಇಂದು ಮಹಿಳೆ ಹಿಂದುಳಿಯಲು ಮಹಿಳೆಯೇ ಕಾರಣವೇ ? ಎನ್ನುವ ಜಿಜ್ಞಾಸೆ ಕಾಡುತ್ತಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವೆಡೆ ಮಹಿಳೆಯರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲ ಅನಾಚಾರ ಹೋಗಲಾಡಿಸಲು ಸಾಧ್ಯವಿಲ್ಲವೇ ಎನ್ನುವ ಆಕ್ರೋಶ ದೇಶದ ಪ್ರತಿಯೊಬ್ಬ ಮಹಿಳೆಯರಲ್ಲಿಯೂ ಬಾರದೇ ಇರದು. ಆದರೆ, ಅದು ಕಾರ್ಯ ರೂಪಕ್ಕೆ ಬರುವುದು ಹೇಗೆ, ಎನ್ನುವ ಚಿಂತನೆ ಮಾಡಿದಾಗ ನಮಗೆ ಕಂಡು ಬರುವ ಅಸ್ತ್ರ ಮತದಾನ. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಆದರೆ, ಮಹಿಳೆಯರು ಮಾತ್ರ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಮತದಾನದಿಂದ ದೂರ ಉಳಿಯುತ್ತಿದ್ದಾರೆ ಹಾಗಾಗಿಯೇ ದೇಶ ದ್ರೋಹಿಗಳು, ಮಹಿಳೆಯರ ಹಿತವನ್ನು ಬಲಿಕೊಡುವ ಜನರೆಲ್ಲಾ ಚುನಾಯಿತರಾಗುತ್ತಿರುವುದರಿಂದ ಈ ಸಮಸ್ಯೆ ಹೆಚ್ಚುತ್ತಿದೆ.
ಮಹತ್ವದ ಪಾತ್ರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಅದರಲ್ಲಿಯೂ ಮುಖ್ಯವಾಗಿ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಸಹಭಾಗಿತ್ವ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಅದಕ್ಕಾಗಿ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇನ್ನು ಉತ್ತಮ ಸ್ಥಾನಗಳು ಸಿಗಬೇಕು. ತಕ್ಷಣವೇ ಶೇ. 50 ರಷ್ಟು ಮೀಸಲಾತಿ ಜಾರಿಗೊಳಿಸಬೇಕು.
ಇಲ್ಲದಿದ್ದರೆ ಮಹಿಳೆಯರು ಎಂದಾಕ್ಷಣ ನಾವು ಹೆಳಿದ್ದನ್ನೆಲ್ಲ ಕೇಳಿಕೊಂಡು ಸುಮ್ಮನೆ ಇರುವವರು ಎನ್ನುವ ಭಾವನೆಯಲ್ಲಿ ಮಹಿಳೆಯರನ್ನು ಪರಿಗಣಿಸಲಾಗುತ್ತಿರುವುದರಿಂದ ಮಹಿಳೆಯರ ಮೇಲೆ ಹಲವು ರೀತಿಯ ದೌರ್ಜನ್ಯ ನಡೆಯುತ್ತಿವೆ.
ಇದಕ್ಕೆಲ್ಲ ಸೂಕ್ತ ಪರಿಹಾರ ಮಹಿಳೆಯರು ಕಂಡುಕೊಳ್ಳಬೇಕಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗೆ ಮತ ಹಾಕಬೇಕು. ಗದಗ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಹಾಗಾಗಿ ಗದಗ ಜಿಲ್ಲೆಯ ಮಟ್ಟಿಗೆ ಮಹಿಳೆಯರಿಗೆ ತೀವ್ರ ಹಿನ್ನಡೆಯಾಗಲಿದೆ.
ಅಭ್ಯರ್ಥಿಗಳ ಬಗ್ಗೆ ಪಟ್ಟಿ ಮಾಡಿ: ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ನಡೆ, ನುಡಿ, ಆಚಾರ, ವಿಚಾರ, ಜನಪರ ಕಾಳಜಿ, ಸಾರ್ವಜನಿಕರ ಸಮಸ್ಯೆಗಳಿಗೆ ಅವರು ಸ್ಪಂದಿಸುವ ರೀತಿ, ಈ ಹಿಂದೆ ಅವರು ಚುನಾಯಿತರಾಗಿದ್ದಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕರೊಂದಿಗೆ ಅವರು ಹೊಂದಿರುವ ಸಂಪರ್ಕ ಈ ಎಲ್ಲ ವಿಷಯಗಳ ಕುರಿತು ಅಭ್ಯರ್ಥಿಗಳ ಬಗ್ಗೆ ಪ್ರತ್ಯೇಕ ಪಟ್ಟಿ ತಯಾರಿಸಿ, ಅದರಲ್ಲಿಯೇ ಕಡಿಮೆ ಭ್ರಷ್ಟರು ಹಾಗೂ ಹೆಚ್ಚಿನ ಜನಪರ ಕಾಳಜಿ ಹೊಂದಿದವರಿಗೆ ಮತ ನೀಡಬೇಕಾದ ಅನಿವಾರ್ಯತೆ ನಮಗೆಲ್ಲಾ ನಿರ್ಮಾಣವಾಗಿದೆ.
ಇಂದು ಮಹಿಳೆ ನಾನೊಬ್ಬಳೇ ಮತಾದಾನ ಮಾಡಿದರೆ ಎಲ್ಲವೂ ಬದಲಾಗಲು ಸಾಧ್ಯವೇ ಎಂದು ವಿಚಾರಿಸಿ ಮತದಾನ ಮಾಡಲು ಮುಂದಾಗುವುದಿಲ್ಲ. ಹಾಗಾಗಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತ್ತಿವೆ. ಜಗತ್ತಿನ 5 ರಾಷ್ಟ್ರಗಳು ಸ್ತ್ರೀಯರ ವಾಸಕ್ಕೆ ಯೋಗ್ಯವಲ್ಲ ಎನ್ನುವ ಸಂಶೋಧನಾ ವರದಿ ಈಚೆಗೆ ಬಹಿರಂಗಗೊಂಡಿದ್ದು, ಅದರಲ್ಲಿ ಭಾರತವೂ ಇದೆ ಎನ್ನುವುದು ಅತ್ಯಂತ ಬೇಸರದ ಸಂಗತಿ. ಮಹಿಳೆಯರಿಗೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಮಹಿಳೆಯರು ಮತದಾನಕ್ಕೆ ಮುಂದಾಗಬೇಕಿದೆ.
ಮಹಿಳೆಯರು ರಾಜಕೀಯದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು, ಕೇವಲ ಮಹಿಳೆಯರಿಗೆ ಮಾತ್ರವಲ್ಲ, ದೇಶದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಬೇಕು. ಒಳ್ಳೆಯ ಚಾರಿತ್ರ್ಯ ಹೊಂದಿರುವ ವ್ಯಕ್ತಿಯನ್ನು ಆಯ್ಕೆಮಾಡಬೇಕಾದ ಜವಾಬ್ದಾರಿ ಎಲ್ಲ ಮಹಿಳೆಯರ ಮೇಲಿದೆ. ನಮ್ಮೆಲ್ಲರ ಜವಾಬ್ದಾರಿಯನ್ನು ಅರಿತು ಮೇ. 5 ರಂದು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕು. ಎಲ್ಲರೂ ಮತದಾನಕ್ಕೆ ಬರುತ್ತೀರಲ್ಲಾ.. All the best... Voting is not just a process, it is voting for betterment of society, voting is in your hand Make it useful..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

