ಗದಗ

ಗ್ರಂಥಪಾಲಕರ ವೇತನ ಹೆಚ್ಚಿಸಲು ಕ್ರಮ

Published On :

ಗದಗ: ಹೈಕೋರ್ಟ್ ತೀರ್ಪಿನ ಅನ್ವಯ ಪಪೂ ಶಿಕ್ಷಣ ಇಲಾಖೆಯಲ್ಲಿ ಸಾಮಾನ್ಯ ಪದವಿ ಜತೆಗೆ ಗ್ರಂಥಾಲಯ ವಿಜ್ಞಾನ ಪದವಿ ಪಡೆದಿರುವ ಗ್ರಂಥಪಾಲಕರಿಗೆ 1970ರಲ್ಲಿ ನೀಡಿದ ವೇತನ ಶ್ರೇಣಿ ರು.  175-400 ಬದಲಾಗಿ ಕಾಲೇಜು ಶಿಕ್ಷಣ ಗ್ರಂಥಪಾಲಕರ ವೇತನ ಶ್ರೇಣಿ ರು.  250-500 ಪೂರ್ನಾನ್ವಯವಾಗಿ ನೀಡಲು ಸರ್ಕಾರ ಒಪ್ಪಿಗೆ ನೀಡಿ ಆದೇಶ ಸಂಖ್ಯೆ ಪ.ಪೂ.ಶಿ/ಸಿಬ್ಬಂದಿ-3/ಎ-ಎಸ್/ರಿ.ಅ. 247/2011 ಅಡಿ ಆಜ್ಞೆ ಹೊರಡಿಸಿದೆ ಎಂದು ರಾಜ್ಯ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ, ರಾಜ್ಯ ಗ್ರಂಥಪಾಲಕರ ಸಂಘದ ಕಾರ್ಯದರ್ಶಿ ಎನ್. ಜಿ.ಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಪಪೂ ಕಾಲೇಜುಗಳ ಗ್ರಂಥಪಾಲಕರ ಸಂಘ ಮತ್ತು 42 ಗ್ರಂಥಪಾಲಕರು ವೇತನ ಪರಿಷ್ಕರಣೆ ಕುರಿತು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದನ್ನು ಹಾಗೂ ಇಲಾಖೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೈಕೋರ್ಟ್ ತೀರ್ಪಿನನ್ವಯ ಸದ್ಯ ಸೇವೆಯಲ್ಲಿರುವ ಗ್ರಂಥಪಾಲಕರು, ಸೇವೆಗೆ ಸೇರಿದ ದಿನದಿಂದಲೇ ವೇತನ ಪರಿಷ್ಕರಣೆಯ ಲಾಭವನ್ನು ಪಡೆಯಲಿದ್ದು, ಕನಿಷ್ಠ ರು.  5ರಿಂದ 10 ಲಕ್ಷ ಬಾಕಿ ವೇತನ ಪಡೆಯುವರು. ಪಪೂ ಶಿಕ್ಷಣ ಇಲಾಖೆಯ ಇತ್ತೀಚಿನ ವೇತನ ಪರಿಷ್ಕರಣೆ ಆದೇಶದನ್ವಯ ಹೊಸದಾಗಿ ನೇಮಕಾತಿ ಹೊಂದುವ ಗ್ರಂಥಪಾಲಕರಿಗೆ 6ನೇ ವೇತನದ ಶ್ರೇಣಿಯಲ್ಲಿ ರು.  20 ಸಾವಿರ ನಿಗದಿಯಾಗಲಿರುವುದು ಎಂದು ಕಾರ್ಯಾಧ್ಯಕ್ಷ ಪ್ರಾ. ಲಿಂಗಯ್ಯ ಹಿರೇಮಠ, ಗ್ರಂಥಪಾಲಕರ ಸಂಘದ ಪದಾಧಿಕಾರಿ ಎಂ.ಟಿ. ನಾಯಕ ಮತ್ತು ಎಸ್.ಬಿ. ಹುಲ್ಲತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಾಲ್ಮೀಕಿ ಸಮಾಜ ಸಭೆ
ಗದಗ: ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದವರ ಸಭೆಯನ್ನು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಏ. 13ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಭೆಗೆ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಟಿ. ಈಶ್ವರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.