ಕೆಜೆಪಿಗೆ ಅಪಾರ ಜನ ಬೆಂಬಲ: ಸಂಕಣ್ಣವರ
ಮುಳಗುಂದ: ಕೆಜೆಪಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೊಸ ಹೊಸ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಬರುವಂತೆ ಮಾಡಿದ್ದಾರೆ. ಜನತೆ ತಮಗೆ ಆಶೀರ್ವದಿಸಬೇಕೆಂದು ಎಸ್.ಬಿ. ಸಂಕಣ್ಣವರ ಹೇಳಿದರು.
ಈಚೆಗೆ ಅವರು ಪಟ್ಟಣದಲ್ಲಿ ಕೆಜೆಪಿಪರ ಮತಯಾಚನೆ ನಡೆಸಿ, ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನ್ಯ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಸದು ಮದರಿಮಠ ಮಾತನಾಡಿ, ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲು ಕೆಜೆಪಿಗೆ ಜನತೆ ಮತ ನೀಡಬೇಕು. ಕೆಜೆಪಿಯಿಂದ ರಾಜ್ಯದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು. ಪಕ್ಷದ ಎಸ್ಸಿ, ಎಸ್ಟಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಹಳ್ಳಿಕೇರಿ, ವಿಕ್ರಾಂತ ಅಬ್ಬಿಗೇರಿ, ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ, ರಾಚಪ್ಪ ವಾಲಿ, ಪ್ರಸಾದ ಕೊಟಗಿ, ಭರತ ಹೂಗಾರ, ಖಾಲೀದ ಕೊಪ್ಪಳ ಸಮ್ಮುಖದಲ್ಲಿ ಗ್ರಾಮಸ್ಥರಾದ ರಾಜಣ್ಣ ದೊಡ್ಡಮನಿ, ಬಸಪ್ಪ ಚವ್ಹಾಣ, ದೇವಪ್ಪ ಚವ್ಹಾಣ, ಗೋವಿಂದಪ್ಪ ರಾಠೋಡ, ಬಸವರಾಜ ಚವ್ಹಾಣ, ನಿಂಗಪ್ಪ ಚವ್ಹಾಣ, ಸುರೇಶ ಗಾಯಕವಾಡ, ಗೋಪಾಲ ಚವ್ಹಾಣ, ಕಿರಣ ದೊಡ್ಡಮನಿ, ಲಕ್ಷ್ಮಣ ಗಾಯಕವಾಡ, ಪುತನಪ್ಪ ರೋಣ, ಸುಬ್ಬಣ್ಣ ರಾಠೋಡ, ಸುರೇಶ ದೊಡ್ಡಮನಿ, ದೇವಪ್ಪ ಚವ್ಹಾಣ ಮುಂತಾದವರು ಕೆಜೆಪಿಗೆ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

