ಬಿಜೆಪಿಗೆ ತಕ್ಕಪಾಠ ಕಲಿಸಿ: ಕೆಂಗಾರ
ರೋಣ: ರಾಜ್ಯದಲ್ಲಿ 5 ವರ್ಷಗಳ ಆಡಳಿತ ನಡೆಸಿ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಕಾಲಹರಣ ಮಾಡಿರುವ ಬಿಜೆಪಿಗೆ ಮತದಾರರು ತಕ್ಕಪಾಠ ಕಲಿಸಬೇಕು ಎಂದು ಜಿಪಂನ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು.
ಅವರು ಗುರುವಾರ ಸಂಜೆ ತಾಲೂಕಿನ ನೈನಾಪುರ ಗ್ರಾಮದಲ್ಲಿ ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಪರ ಮತ ಪ್ರಚಾರ ಕೈಗೊಂಡು ಬಳಿಕ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಮಾಜಿ ಸಂಸದ ಆರ್.ಎಸ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಯಾವ ರೀತಿಯಾಗಿ ಜನತೆಗೆ ಅನ್ಯಾಯ ಮಾಡಿದೆ ಎಂಬುದನ್ನು ಜನತೆ ಅರಿತಿದ್ದು, ಮೇ 5ರಂದು ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಿರ್ಣಾಯಕ ತೀರ್ಪು ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಕೊತಬಾಳ, ಹಿರೇಹಾಳ, ತಳ್ಳಿಹಾಳ, ಬಸರಕೋಡ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಪ್ರ ಚಾರದ ಸಂದರ್ಭದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರುತ್ತಿರುವುದು ವಿಶೇಷವಾಗಿತ್ತು. ಇದೇ ವೇಳೆ ನಿಂಗಪ್ಪ ಕೆಂಗಾರ ಸಮ್ಮುಖದಲ್ಲಿ ನೈನಾಪುರ ಗ್ರಾಮದ ಮಹೇಶ ಮಾದರ, ಮಹಾದೇವಪ್ಪ ಪೂಜಾರ, ಯಲ್ಲಪ್ಪ ಮಾದರ, ಮಹೇಶ ಹಾದಿಮನಿ, ಯಮನಪ್ಪ ಮಾದರ ಸೇರಿದಂತೆ ನೂರಾರು ದಲಿತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಪ್ರಚಾರ ಕಾರ್ಯದಲ್ಲಿ ಬಸಪ್ಪ ಶಾಂತಪ್ಪನವರ, ನಿಂಗಪ್ಪ ನಂದಿಕೇಶ್ವರ, ಎಸ್.ಎಫ್. ಸಂಕನಗೌಡ್ರ, ಯಮನಪ್ಪ ಮಾದರ, ಗ್ರಾ.ಪಂ. ಅಧ್ಯಕ್ಷ ಅಡಿಕೆಪ್ಪ ಬಾವಿ, ಶಂಕರಗೌಡ ಮುದಕನಗೌಡ್ರ, ಮೈಲಾರಪ್ಪ ರಂಗನಗೌಡ್ರ, ಈರಪ್ಪ ಓಲೆಕಾರ, ಶಿವಪ್ಪ ಹುನಗುಂಡಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

