ಕಾಂಗ್ರೆಸ್ ಗೆಲವು ನಿಶ್ಚಿತ: ಪಾಟೀಲ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 14
ಬಿಜೆಪಿ ದುರಾಡಳಿತದಿಂದ ಬೇಸತ್ತ ರೋಣ ವಿಧಾನಸಭಾ ಮತಕ್ಷೇತ್ರದ ಪ್ರಜ್ಞಾವಂತ ಮತದಾರನ ಮನಸ್ಸಿನಲ್ಲಿ ಕಾಂಗ್ರೆಸ್ ನೆಲೆಯೂರಿದೆ. ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತದಿಂದ ವಿಜಯ ಸಾಧಿಸಲಿದೆ ಎಂದು ಮಾಜಿ ಸಂಸದ ಆರ್.ಎಸ್. ಪಾಟೀಲ ಹೇಳಿದರು.
ಭಾನುವಾರ ಸಮೀಪದ ಪುರ್ತಗೇರಿ ಗ್ರಾಮದಲ್ಲಿ ಬಿಜೆಪಿ ತೊರೆದ ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದರು.
ಕ್ಷೇತ್ರದ ಎಲ್ಲೆಡೆ ಯುವಕರು ತಂಡೋಪತಂಡವಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಭಾಗದ ಸಚಿವರು ಅಧಿಕಾರದ ಗುಂಗಿನಲ್ಲಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದಿರುವುದು ದುರದೃಷ್ಟಕರ. ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಿದ ಬಿಜೆಪಿ ಆಡಳಿತ ವೈಖರಿಯಿಂದ ಭ್ರಮನಿರಸನಗೊಂಡ ಎಲ್ಲ ಸಮುದಾಯಗಳ ಮತದಾರರು ಕಾಂಗ್ರೆಸ್‌ನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಅಧಿಕಾರ ಇಲ್ಲದಿದ್ದರೂ ಜನಸೇವೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾದ ಸಹೋದರ ಜಿ.ಎಸ್. ಪಾಟೀಲರಿಗೆ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಸೊನ್ನದ, ಮೋಹನಸಾ ರಾಯಬಾಗಿ, ಗಿರೀಶ ರಾಯಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಂಪುರ ಗ್ರಾಪಂ ಸದಸ್ಯ ಲಕ್ಷ್ಮಣ ಗೂಳಿ, ಮಾಜಿ ಅಧ್ಯಕ್ಷ ಎಸ್.ಎಸ್. ಹಡಪದ, ಬಾಪುಸಾಬ ಕಿಲ್ಲೇದಾರ, ಪರಸಪ್ಪ ಮುಶಿಗೇರಿ, ಯಮನಪ್ಪ ಮುಶಿಗೇರಿ, ಶಿವಬಸಪ್ಪ ಹಡಗಲಿ, ಫಕೀರಪ್ಪ ಹಡಪದ, ಪಾಂಡುರಂಗ ಕೆರಿಕಟ್ಟಿ, ಈಶಪ್ಪ ಹಡಪದ, ರಸೂಲಸಾಬ ಸುಂಕದ, ವೀರಣ್ಣ ಹಡಪದ ಕಾಂಗ್ರೆಸ್ ಸೇರ್ಪಡೆಯಾದರು. ಚಂಬಣ್ಣಾ ಚವಡಿ, ಶರಣಪ್ಪ ಕೊಟಗಿ, ಎಸ್.ಎಂ. ಆರಗಿದ್ದಿ, ವೆಂಕಟೇಶ ಮುದ್ಗಲ್, ದತ್ತುಸಾ ಬಾಕಳೆ, ರವಿ ಗಡೇದವರ, ಮುರ್ತುಜಾ ಡಾಲಾಯತ್, ಎಫ್.ಎಸ್. ಕರಿದುರಗನವರ, ಸುರೇಶ ಚವಡಿ, ಶ್ರೀಧರ ಚುಂಚಾ, ಪ್ರಶಾಂತ ಶಿರೋಡಕರ, ಬಿ.ಎಂ. ಕುಂಬಾರ, ಬಸವರಾಜ ಹೂಗಾರ, ಗುಂಡಪ್ಪ ಕೊಟಗಿ ಉಪಸ್ಥಿತದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

