ಯುವಕರು ಸಮೃದ್ಧ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಏ. 14
ಸ್ವಜನ ಪಕ್ಷಪಾತ ಹಾಗೂ ವ್ಯಾಪಕ ಭ್ರಷ್ಟಾಚಾರ ನಡೆಸಿ, ಜನತಂತ್ರ ಮೌಲ್ಯಗಳನ್ನು ಗಾಳಿಗೆ ತೂರಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಯುವಕರು ರಾಷ್ಟ್ರಪಿತ ಮಹಾತ್ಮಗಾಂಧಿ ಮಾದರಿಯಲ್ಲಿ ಸಮರ ಸಾರಿ, ಜನರನ್ನು ಜಾಗೃತಗೊಳಿಸಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮರುಸ್ಥಾಪಿಸಿ ಸಮೃದ್ಧಿ, ಸ್ವಾಭಿಮಾನ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ ಕೆಲಸ ಮಾಡಬೇಕೆಂದು ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜರುಗಿದ ಯುವ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬದಲಾವಣೆ ಮಂತ್ರದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದು, ಭ್ರಷ್ಟಚಾರ ನಡೆಸಿ ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಹಣ ಬಲದ ಮೂಲಕ ಪ್ರಜಾಪ್ರಭುತ್ವವನ್ನು ಕೊಳ್ಳುವ ಮಟ್ಟಕ್ಕೆ ಇಳಿದ ಬಿಜೆಪಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದೆ. ಮಂತ್ರಿಗಳು, ಶಾಸಕರು ಸಾರ್ವಜನಿಕ ಜೀವನದ ಘನತೆ, ಗಾಂಭೀರ್ಯಕ್ಕೆ ಕಳಂಕ ತಂದರು. ಜೈಲಿಗೆ ಪರೇಡ ನಡೆಸಿ ರಾಜಕಾರಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದರು. ಇಂಥಹ ಭ್ರಷ್ಟ ರಾಜಕಾರಣಿಗಳಿಗೆ ಈ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವಂತೆ ಕೋರಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಬಡವರ ಜನಸಾಮಾನ್ಯರ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿದೆ. ಎಲ್ಲ ವರ್ಗದ ಜನರ ಏಳ್ಗೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಜನರು ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು. ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು ಎಂದರು. ಕೆಪಿಸಿಸಿ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷ ಟಿ. ಈಶ್ವರ, ಬಸವರಾಜ ರಾಜೂರು, ಸಚಿನ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಎಪಿಎಂಸಿ ಉಪಾಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ವಹಿಸಿದ್ದರು. ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಸದಸ್ಯ ಪ್ರಕಾಶ ಬಾಕಳೆ, ಜಾವೇದ ಮುಜಾವರ, ಎಂ.ಸಿ. ಶೇಖ, ಎಚ್.ವೈ.
ದೇಸಾಯಿಗೌಡ, ಎಲ್.ಡಿ. ಚಂದಾವರಿ, ಬಿ.ಬಿ. ಅಸೂಟಿ, ಅನೀಲ ಗರಗ, ಬಿ.ಎನ್. ದಾಯಮ್ಮನವರ, ಬಸವರಾಜ ಕಡೇಮನಿ, ಮಂಜುನಾಥ ಪೂಜಾರ, ಭರತ ಇರಾಳ, ಅಕ್ಬರಸಾಬ್ ಬಬರ್ಚಿ, ಶ್ರೀನಿವಾಸ ಹುಯಿಲಗೋಳ, ಅನೀಲ ಸಿಂಗಟಾಲಕೇರಿ, ಪರಪ್ಪ ಬಂದಕನವರ, ಗುರಣ್ಣ ಬಳಗಾನೂರ, ಕೃಷ್ಣಾ ಪರಾಪುರ, ನಮಾಜಿ, ಕಮಲಾ ಹಾದಿಮನಿ, ಜೆ.ಎಂ. ದಂಡಿನ, ರವಿ ಇನಾಮತಿ, ಚೆನ್ನವೀರ ಮಳಗಿ, ಸೂರಜ ಜಮಾದಾರ, ಅಸ್ಲಂ ನರೇಗಲ್ಲ, ಎಂ.ಎಂ. ಕುಕನೂರು ಮುಂತಾದವರು ಉಪಸ್ಥಿತರಿದ್ದರು. ರವಿಕುಮಾರ ರಡ್ಡಿ ಸ್ವಾಗತಿಸಿದರು. ಮಂಜುನಾಥ ಮುಳಗುಂದ ನಿರೂಪಿಸಿದರು. ಅಶೋಕ ಮಂದಾಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

