ಗದಗ: 47 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ
ಗದಗ: ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದ 63ರಲ್ಲಿ 14 ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆದಿದ್ದು, 47 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಉಮೇದುವಾರಿಕೆಯನ್ನು ಹಿಂದೆ ಪಡೆದವರ ಕ್ಷೇತ್ರವಾರು ವಿವರ. ಶಿರಹಟ್ಟಿ ವಿಧಾನಸಭೆ ಕ್ಷೇತ್ರ ಲಕ್ಷ್ಮಣ ಈಶ್ವರಪ್ಪ ಲಮಾಣಿ (ಪಕ್ಷೇತರ), ಮಲ್ಲಪ್ಪ ತಿರುಕಪ್ಪ ಮಾಳಮ್ಮನವರ (ಪಕ್ಷೇತರ), ಉಡಚಪ್ಪ ಕಾಕಪ್ಪ ದಂಡಾಪುರ (ಪಕ್ಷೇತರ), ಶಿವಪ್ಪ ಹರಿಯಪ್ಪ ಪವಾರ (ಪಕ್ಷೇತರ). ಗದಗ ವಿಧಾನಸಭೆ ಕ್ಷೇತ್ರ ಬಸವಣೆಪ್ಪ ಗೂಳೆಪ್ಪನವರ (ಪಕ್ಷೇತರ ), ಮಂಜುನಾಥ ವಿರೂಪಾಕ್ಷಗೌಡ ಹಳ್ಳಿಕೇರಿ (ಪಕ್ಷೇತರ), ರುದ್ರಪ್ಪ ಬಸಪ್ಪ ಕುಂಬಾರ (ಪಕ್ಷೇತರ). ರೋಣ ವಿಧಾನಸಭಾ ಕ್ಷೇತ್ರ ಅಂದಾನಪ್ಪ ಗುರುಬಸಪ್ಪ ಅಳವಂಡಿ (ಪಕ್ಷೇತರ), ವೀರಭದ್ರಪ್ಪ ವೀರಪ್ಪ ಬಂಡಿ ಉರ್ಫ ಕಬ್ಬಿಣದ (ಪಕ್ಷೇತರ), ರಾಮಪ್ಪ ಸೋಮಪ್ಪ ಮೇಗಲಮನಿ (ಬಿಎಸ್ಆರ್ ಕಾಂಗ್ರೆಸ್). ನರಗುಂದ ವಿಧಾನಸಭಾ ಕ್ಷೇತ್ರ ಬಸವರಾಜ ದ್ಯಾಮಪ್ಪ ಸಾಬಳೆ (ಪಕ್ಷೇತರ), ಪ್ರಕಾಶ ನಾಗನಗೌಡ ನಾಗನೂರ (ಪಕ್ಷೇತರ), ಸುಮಾ ಶಿವನಗೌಡರ (ಪಕ್ಷೇತರ).
ಇಂದು ಗದಗಕ್ಕೆ ಜೋಶಿ
ಗದಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಲಿರುವ ಪ್ರಲ್ಹಾದ ಜೋಶಿಯವರನ್ನು ಸ್ವಾಗತಿಸಲು ಬೃಹತ್ ಬೈಕ್ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಏ. 21ರ ಬೆಳಗ್ಗೆ 11 ಗಂಟೆಗೆ ಮುಳಗುಂದ ರಸ್ತೆಯ ಅಂಬಾಭವಾನಿ ಗುಡಿಯಿಂದ ಬೈಕ್ ರ್ಯಾಲಿ ಆರಂಭಗೊಳ್ಳಲಿದೆ. ಅಂಬಾಭವಾನಿ ದೇವಸ್ಥಾನದಿಂದ ಮುಳಗುಂದ ನಾಕಾ, ಜೋಡ ಮಾರುತಿ ದೇವಸ್ಥಾನ, ಜುಮ್ಮಾ ಮಸೂತಿ, ಸರಾಫ ಬಜಾರ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ, ತೋಂಟದಾರ್ಯ ಮಠ, ಕೆಸಿ ರಾಣಿ ರೋಡ್, ಟ್ಯಾಗೋರ ರೋಡ್, ವೆಂಕಟೇಶ ಟಾಕೀಜ ರಸ್ತೆಗಳಲ್ಲಿ ರ್ಯಾಲಿ ನಡೆಯಲಿದ್ದು, ಪಂ. ಪುಟ್ಟರಾಜ ಗವಾಯಿಗಳವರ ಕಲಾ ಭವನದಲ್ಲಿ 11.30ಕ್ಕೆ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಹರ ಕಾರ್ಯದರ್ಶಿ ಕರವೀರಪ್ಪ ನಂದರಗಿ, ಬಸವರಾಜ ಶೀರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬೈಕ್ ರ್ಯಾಲಿ
ಗದಗ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ಗದಗಿಗೆ ಆಗಮಿಸುತ್ತಿರುವ ಪ್ರಲ್ಹಾದ ಜೋಶಿಯವರನ್ನು ಸ್ವಾಗತಿಸಲು ಬೆಟಗೇರಿಯಲ್ಲಿ ಏ. 21ರ ಬೆಳಗ್ಗೆ 9 ಗಂಟೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಶಹರ ಘಟಕದ ಅಧ್ಯಕ್ಷ ತೋಟೋಸಾ ಭಾಂಡಗೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಬೆಟಗೇರಿ ಶ್ರೀರಾಮ ಮಂದಿರ ಹತ್ತಿರದ ದೇವರ ದಾಸಿಮಯ್ಯ ವೃತ್ತ, ಬೆಟಗೇರಿ ಬಸ್ ನಿಲ್ದಾಣ, ಪಾಲಾ ಬದಾಮಿ ರಸ್ತೆ, ಹುಯಿಲಗೋಳ ರೋಡ್, ಅಶೋಕ ರೋಡದಿಂದ ಹೆಲ್ತ್ ಕ್ಯಾಂಪ್, ಪಾಲಾ ಬದಾಮಿ ರೋಡ್, ಸ್ಟೇಶನ್ ರೋಡ್, ಗಾಂಧಿವೃತ್ತ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣ ವೃತ್ತ, ಸರಾಫ ಬಜಾರ, ಜಗದಂಬಾ ದೇವಸ್ಥಾನ, ಜೋಡ ಮಾರುತಿ ದೇವಸ್ಥಾನ, ಮುಳಗುಂದ ನಾಕಾಗಳಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಮತಕ್ಷೇತ್ರದ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು, ಅಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಹರ ಯುವ ಮೋರ್ಚಾದ ಅಧ್ಯಕ್ಷ ಆನಂದ ಶ್ಯಾವಿ, ಕಾರ್ಯದರ್ಶಿ ಸುದೀರ ಕಾಟಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

