ಬಿಜೆಪಿ ಸಾಧನೆ ಮತದಾರರೇ ಪ್ರಶ್ನಿಸಲಿ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಏ. 23
ಗದಗ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುವ ಬಿಜೆಪಿ ನಾಯಕರಿಗೆ ರು. 1 ಲಕ್ಷ 50 ಸಾವಿರ ಕೋಟಿ ರಾಜ್ಯದ ಸಂಪತ್ತು ಲೂಟಿ ಮಾಡಿರುವರು ಯಾರು ? ಗದಗ ಕ್ಷೇತ್ರದಲ್ಲಿ ಮನೆ ಕಟ್ಟುವುದಾಗಿ ಬಡವರಿಂದ ಸಂಗ್ರಹಿಸಿದ 40 ಸಾವಿರ ಮನೆ ಅರ್ಜಿಗಳು ಏನಾದವು ? ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ಕೊಡುತ್ತೇವೆಂದು ಹೇಳಿದ್ದರು. ಆದರೆ, ಏಕೆ ಕೊಡಲಿಲ್ಲವೆಂದು ನಿಮ್ಮ ಬಳಿ ಬಿಜೆಪಿಯವರು ಬಂದಾಗ ಕೇಳಿರಿ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಮತದಾರರಿಗೆ ಹೇಳಿದರು.
ಈಚೆಗೆ ಅವರು ಬೆಟಗೇರಿಯ ಉಂಕಿಕೇರಿಯಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ 10 ಲಕ್ಷ ಮನೆಗಳನ್ನು ಬಡವರಿಗೆ ಕಟ್ಟಿಕೊಡಲಾಯಿತು. ನಾನು ಸಚಿವ ಹಾಗೂ ಸಹೋದರ ಡಿ.ಆರ್. ಪಾಟೀಲ ಶಾಸಕರಾಗಿದ್ದ ಸಂದರ್ಭದಲ್ಲಿ ಗದಗ ಕ್ಷೇತ್ರದಲ್ಲಿ 14 ಸಾವಿರ ಮನೆಗಳನ್ನು ಬಡವರಿಗೆ ಹಂಚಿದ್ದೇವೆ. ಎಸ್.ಎಂ. ಕೃಷ್ಣ ನಗರ, ಗಂಗಿಮಡಿ, ಕಳಸಾಪುರ, ಸುಡಗಾಡ ಸಿದ್ಧರ ಕಾಲೋನಿ, ರಾಮನಗರ, ಗದುಗಿನ ಸುತ್ತಮುತ್ತ ಬಡವರಿಗಾಗಿ ಕಾಲೋನಿಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ್ದು ಕಾಂಗ್ರೆಸ್. ಆದರೆ, ಬಿಜೆಪಿ ಒಂದೇ ಒಂದು ಮನೆ ಕಟ್ಟಿಸಲಿಲ್ಲ. ಕಾಲನಿ ನಿರ್ಮಿಸಲಿಲ್ಲ ಎಂದರು.
ಸಿ.ಎಂ. ಹುಲಗೂರ ಮಾತನಾಡಿ, ಶುದ್ಧ ನೀರು ನೀಡಿ, ಜನರ ಬದುಕನ್ನು ಹಸನಾಗಿಸಿದ ಪ್ರಾಮಾಣಿಕ ನಾಯಕ ಎಚ್.ಕೆ. ಪಾಟೀಲರಿಗೆ ತಮ್ಮ ಅಮೂಲ್ಯ ಮತ ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು. ಎಚ್.ಕೆ. ಪಾಟೀಲರು ಬೆಟಗೇರಿ 3ನೇ ವಾರ್ಡ್, 6,7,10ನೇ ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

