ಗದಗ

ಗದಗ-ಬೆಟಗೇರಿ ಅಭಿವೃದ್ಧಿ ವಂಚಿತ

Published On :

ಗದಗ: ಐದು ವರ್ಷಗಳಲ್ಲಿ ಗದಗ-ಬೆಟಗೇರಿ ನಗರವು ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು. ಈಚೆಗೆ ಅವರು ಬೆಟಗೇರಿಯ 2ನೇ ವಾರ್ಡಿನ ಗಾಂಧಿನಗರದ 30ಕ್ಕೂ ಹೆಚ್ಚು ಮುಖಂಡರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡು ಮಾತನಾಡಿದರು.  ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿ ಅಭಿವೃದ್ಧಿ ಕುಂಠಿತಗೊಳಿಸಿದ್ದಾರೆ. ಬಡವರಿಗೆ ಮನೆ ನಿರ್ಮಿಸಿಲ್ಲ. ಬಡವರ ಹೆಸರಲ್ಲಿ ಅರ್ಜಿ ಸಂಗ್ರಹಿಸಿ ಮೂಗಿಗೆ ತುಪ್ಪ ಸವರಿದ್ದು, ಇದರಿಂದ ಬಡವರು ಕಂಗಲಾಗಿದ್ದಾರೆ. ಬಡವರ ಬದುಕಿನ ಜತೆ ಚೆಲ್ಲಾಟ ಮಾಡುವವರಿಗೆ ಜನರೇ ತಕ್ಕ ಪಾಠ ಕಲಿಸಲು ಮುಂದಾಗಬೇಕಿದೆ. ಹಾಗೂ ಮತಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. ದಾವಲ್ ಪವಾರ, ಬಾಬು ಕಾಳೆ, ಪರಶುರಾಮ ಕಾಳೆ, ಬಾಬು ಕಾಳೆ, ರಾಮು ದೊಡಮನಿ, ಕುಮಾರ ದೊಡಮನಿ, ಶಂಕರ ಪವಾರ, ಚಂದ್ರು ಪವಾರ, ಮಹಾಂತೇಶ ಚವ್ಹಾಣ ವಿಠ್ಠಲ ಕಾಳೆ, ಚಂದ್ರು ಕಾಳೆ, ಅಣ್ಣಪ್ಪ ಚವ್ಹಾಣ, ಪ್ರಮೋದ ಕಾಳೆ, ಚಂದ್ರು ದೊಡಮನಿ, ರಾಮಪ್ಪ ದೊಡಮನಿ, ವಿಶ್ವಾಸ, ದೀಪಕ್, ಮಹೇಶ, ಚಂದ್ರು, ರವಿ, ಲೋಕೇಶ, ಸತೀಶ, ಲಕ್ಕಣ್ಣ ಮುಂತಾದವರು ಕಾಂಗ್ರೆಸ್ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.