ಕಾಂಗ್ರೆಸ್ ಕುತಂತ್ರ ರಾಜಕಾರಣ ಫಲಿಸದು: ಉಮೇಶಗೌಡ
ಗದಗ: ಸಿ.ಸಿ. ಪಾಟೀಲರ ಅಭಿವೃದ್ಧಿ ಕಾರ್ಯ ಸಹಿಸದೆ ಕಾಂಗ್ರೆಸ್ ಮುಖಂಡರು ಕುತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಅಭಿವೃದ್ಧಿಯೇ ಮಾಡಿಲ್ಲ ಎಂದು ಮತದಾರರಲ್ಲಿ ಹಾದಿ ತಪ್ಪಿಸುವ ಕಾರ್ಯವನ್ನು ಕ್ಷೇತ್ರದಾದಂತ್ಯ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬೇಡಿ. ಅಭಿವೃದ್ಧಿ ಕಾರ್ಯಗಳು ನಿಮ್ಮ ಮುಂದಿವೆ ಎಂದು ಸಿ.ಸಿ. ಪಾಟೀಲ ಪುತ್ರ ಉಮೇಶಗೌಡ ಪಾಟೀಲ ಹೇಳಿದರು. ಅವರು ಶನಿವಾರ ತಾಲೂಕಿನ ಕದಡಿ, ಬಳಗಾನೂರ ಹಾಗೂ ಹುಯಿಲಗೋಳ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಕೈಗೊಂಡು ಮಾತನಾಡಿದರು. ನಮ್ಮ ತಂದೆಯವರು ಪ್ರತಿ ಗ್ರಾಮಗಳಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ನಾನು ಕ್ಷೇತ್ರದ ತುಂಬೆಲ್ಲಾ ಸುತ್ತಾಡುತ್ತಿದ್ದು ಗ್ರಾಮಸ್ಥರೆ ನಮ್ಮನ್ನು ಕರೆದು ಅಭಿವೃದ್ಧಿ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಯುವಕರೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಇದು ಸಿ.ಸಿ. ಪಾಟೀಲ ಹಾಗೂ ಬಿಜೆಪಿ ಪರವಾಗಿರುವ ಅವರ ನಿಲುವು ಸ್ಪಷ್ಟಪಡಿಸುತ್ತದೆ ಎಂದರು. ಬಳಗಾನೂರ ಗ್ರಾಮದ ಗ್ರಾಪಂ ಸದಸ್ಯೆ ಸುಮಿತ್ರಾ ಛಲವಾದಿ, ಹುಲ್ಲಪ್ಪ ಛಲವಾದಿ, ಶರಣಪ್ಪ ದೊಡ್ಡಮನಿ, ಬಸವರಾಜ ಛಲವಾದಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ವಸಂತ ಮೇಟಿ, ರಾಜುಗೌಡ ಪಾಟೀಲ, ಸಿದ್ದು ಬಂಡಿವಾಡ, ರಾಮನಗೌಡ ದಾನಪ್ಪಗೌಡ್ರ, ತಾಪಂ ಸದಸ್ಯೆ ಎಸ್.ಕೆ. ಹುಯಿಲಗೋಳ, ಎಸ್.ಎಂ. ಹಂಚಿನಾಳ, ಬಿ.ಎಲ್. ಕುಲಕರ್ಣಿ, ಎಸ್.ವಿ. ಹಾಲಕೇರಿ, ಎನ್.ಜಿ. ಹೂಗಾರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

