ಗದಗ

ಮತ್ತೊಮ್ಮೆ ಗೆಲ್ಲುವೆ: ಲಮಾಣಿ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 28
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮನ್ನು ಮತದಾರರು ಜಾತಿ, ಮತ, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಆಯ್ಕೆ ಮಾಡಿದರು. ಈ ಬಾರಿಯೂ ಕ್ಷೇತ್ರದ ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಮತದಾರರು ತಮ್ಮನ್ನು ಆಶೀರ್ವದಿಸುತ್ತಾರೆ ಎಂದು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಸಂಜೆ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕು ಜೆಡಿಎಸ್ ವಕ್ತಾರ ದೇವಪ್ಪ ಇಟಗಿ, ಪುರಸಭೆ ಮಾಜಿ ಸದಸ್ಯ ನೂರಜಾನ್ ತಳಗಡೆ ಹಾಗೂ ಇತರರನ್ನು ಬಿಜೆಪಿಗೆ ಬರಮಾಡಿಕೊಂಡ ಲಮಾಣಿ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ತಮ್ಮ ನೇರ ಎದುರಾಳಿ. ಕೆಜೆಪಿ ಹಾಗೂ ಬಿಎಸ್ಸಾರ್ ಲೆಕ್ಕಕ್ಕಿಲ್ಲ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಕಾಗನೂರಮಠ, ಆರ್.ಎಂ. ತಪ್ಪಡಿ, ಸುರೇಶ ಜೈನ್, ಪ್ರಕಾಶ ಪಾಟೀಲ, ಶಿವು ನವಲಗುಂದ, ಅಂದಪ್ಪ ಕುರುಡಗಿ, ಆನಂದ ಬನ್ನಿಕೊಪ್ಪ, ಮಹೇಶ ನಾಗರಳ್ಳಿ, ಶಂಶುದ್ದೀನ ವಡ್ಡಟ್ಟಿ, ಮಹಾದೇವಪ್ಪ ಬಳ್ಳಾರಿ, ನಾಗರಾಜ ಕೋರ್ಲಹಳ್ಳಿ, ಪರಸಪ್ಪ ಕುಂಬಾರ, ವಿಜಯಕುಮಾರ ರಾಟಿ, ಚಿನ್ನಪ್ಪ ವಡ್ಡಟ್ಟಿ, ಪರಶುರಾಮ ಕರಡಿಕೊಳ್ಳ, ಬಿ.ಕೆ. ಪಾಟೀಲ, ಪರಶುರಾಮ ಸುಣಗಾರ, ಸುರೇಶ ಮಾಳೆಕೊಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.